ನೋಂದಾವಣೆ ಇಲಾಖೆಯಲ್ಲಿ ಭ್ರಷ್ಟಾಚಾರ ರಹಿತ ಸೇವೆ ಖಚಿತಪಡಿಸಲಾಗುವುದು-ಸಚಿವ
ಕಾಸರಗೋಡು: ಶತಮಾನದ ಇತಿಹಾಸವಿರುವ ನೋಂದಾವಣೆ ಇಲಾಖೆ ಕಾಲಾನುಸಾರವಾದ ಬದಲಾವಣೆಗೆ ನೆಗೆಯುತ್ತಿದೆ ಎಂದು ಸಚಿವ ರಾಮಚಂದ್ರನ್ ಕಡನ್ನಪ್ಪಳ್ಳಿ ನುಡಿದರು. ಜಿಲ್ಲಾಧಿಕಾರಿ ಕಾನ್ಫರೆನ್ಸ್ ಸಭಾಂಗಣದಲ್ಲಿ ನೋಂದಾವಣೆ ಇಲಾಖೆ ಡಿಜಿಟಲೈಸೇಶನ್ ಪೂರ್ತಿ ಗೊಳಿಸಿದ ಕಾಸರಗೋಡು, ಆಲ ಪ್ಪುಳ, ಕೋಟ್ಟಯಂ, ಇಡುಕ್ಕಿ ಜಿಲ್ಲೆಗ ಳ ರಾಜ್ಯ ಮಟ್ಟದ ಉದ್ಘಾಟನೆ ನಿರ್ವಹಿಸಿ ಸಚಿವರು ಮಾತನಾಡಿದರು.
ವಿವಿಧ ರೀತಿಯ ಆಧಾರಗಳ ಮಾದರಿಗಳನ್ನು ಸುಲಲಿತಗೊಳಿಸಿ ಅವುಗಳಿಗೆ ರಾಜ್ಯದಾದ್ಯಂತ ಏಕರೂ ಪವನ್ನು ಜ್ಯಾರಿಗೊಳಿಸಲಾಗುವುದು ಎಂದು ಸಚಿವರು ನುಡಿದರು. ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ಸಂಸದ ರಾಜ್‌ಮೋ ಹನ್ ಉಣ್ಣಿತ್ತಾನ್, ಶಾಸಕರಾದ ಎಂ. ರಾಜಗೋಪಾಲನ್, ಇ. ಚಂದ್ರಶೇ ಖರನ್, ಸಿ.ಎಚ್. ಕುಂಞಂಬು, ಜಿ.ಪಂ. ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಕೆ. ಇಂಬಶೇಖರ್, ಚೆಂಗಳ ಪಂ. ಅಧ್ಯಕ್ಷ ಖಾದರ್ ಬದ್ರಿಯ, ಕೆ. ಲೀನ ಮಾತನಾಡಿದರು.