ನ್ಯಾಯವಾದಿ ಸುದರ್ಶನನ್ ನಿಧನ
ಕಾಸರಗೋಡು: ಪಿಲಿಕುಂಜೆ ಶ್ರೀ ಭಗವತೀ ಸೇವಾಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ದಿ| ಟಿ.ಕೆ. ಅಚ್ಯುತನ್ರ ಅಳಿಯ ಮಂಗಳೂರು ಕುಡುಪುವಿನ ನ್ಯಾಯವಾದಿ ಸುದರ್ಶನನ್ (53) ನಿಧನ ಹೊಂದಿದರು. ಕೇಂದ್ರ ಸರಕಾರದ ಜ್ಯುಡೀಶ್ಯಲ್ ವಿಭಾಗದ ಉದ್ಯೋಗಿಯಾಗಿದ್ದರು. ಕುಡುಪುವಿನ ದಿ| ಕೇಶವ- ಕಮಲಾಕ್ಷಿ ದಂಪತಿಯ ಪುತ್ರನಾದ ಮೃತರು ಪತ್ನಿ ರಜಿತ (ದಿ| ಟಿ.ಕೆ. ಅಚ್ಯುತನ್ರ ಪುತ್ರಿ), ಮಕ್ಕಳಾದ ಕೀರ್ತನ (ಎಲ್ಎಲ್ಬಿ ವಿದ್ಯಾರ್ಥಿನಿ), ವೈಷ್ಣವಿ, ಸಹೋದರ ಕಿರಣ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.