ನ್ಯಾಯಾಲಯ ಸೇರಿದಂತೆ ಹಲವೆಡೆಗಳಲ್ಲಿ ಸರಣಿ ಕಳವು: ಆರೋಪಿ ಕೊನೆಗೂ ಸೆರೆ
ಕಾಸರಗೋಡು: ಕಳೆದ ಎರಡೂವರೆ ತಿಂಗಳಲ್ಲಿ ಜಿಲ್ಲೆಯ ಐದೆಡೆಗಳಲ್ಲಿ ಕಳವು ಮತ್ತು ಕಳವುಯತ್ನ ಹಾಗೂ ರಾಜ್ಯದ ಇತರ ಹಲವೆಡೆಗಳಲ್ಲಿ ಕಳವು ನಡೆಸಿದ ಕುಖ್ಯಾತ ಆರೋಪಿಯನ್ನು ಬಂಧಿಸು ವಲ್ಲಿ ಪೊಲೀಸರು ಕೊನೆಗೂ ಸಫಲರಾಗಿದ್ದಾರೆ.
ಕಲ್ಲಿಕೋಟೆ ತೊಟ್ಟಿಲ್ಪಾಲಂ ಕಾವಿಲಂಬಾರ ವೆಟ್ಟಪ್ಪಾರ ನಾಲೋನ್ ಕಾಟಿಲ್ ಸನೀಶ್ ಜೋರ್ಜ್ ಅಲಿ ಯಾಸ್ ಸನಲ್ (44) ಬಂಧಿತನಾದ ಆರೋಪಿ. ಕಾಸರಗೋಡು ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್ ನೇತೃತ್ವದ ಪೊಲೀಸರ ತಂಡ ಈತನನ್ನು ಬಂಧಿ ಸಿದೆ. ಬಂಧಿತ ಇತ್ತೀಚೆಗಿನಿಂದ ಕಣ್ಣೂರು ಚೂಕ್ಲಿ ಪಡನ್ನಕ್ಕೆರೆಯಲ್ಲಿ ವಾಸಿಸ ತೊಡಗಿದ್ದನು. ವಿದ್ಯಾನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಯು.ಪಿ. ವಿಪಿನ್, ಎಸ್.ಐಗಳಾದ ವಿ. ರಾಮಕೃಷ್ಣನ್ ಪರವನಡ್ಕ, ವಿಜಯನ್ ಮಾಲೋತ್ ಮೊದಲಾದವರು ಆರೋಪಿಯನ್ನು ಬಂಧಿಸಿದ ತಂಡದಲ್ಲಿ ಒಳಗೊಂಡಿದ್ದರು. ಅಂಗಮಾಲಿಯಿಂದ ಆರೋಪಿಯನ್ನು ಬಂಧಿಸಲಾಗಿದೆ.
ಕಾಸರಗೋಡು ಜಿಲ್ಲಾ ನ್ಯಾಯಾ ಲಯದಲ್ಲಿ ಕಳವು ಯತ್ನ, ಪ್ರಥಮದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (1)ದ ರೆಕಾರ್ಡ್ ರೂಮ್ನ ಬೀಗ ಮುರಿದು ಕಳವಿಗೆ ಯತ್ನ, ಚೆಂಗಳ ನಾಲ್ಕನೇ ಮೈಲಿನ ಮರದ ಮಿಲ್ಲ್ನಲ್ಲಿ 1.84 ಲ ರೂ. ಕಳವು ಮತ್ತು ನಾಯಮ್ಮಾರ್ ಮೂಲೆಯ ತನ್ಬೀಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಕಚೇರಿಯ ಬಾಗಿಲು ಮುರಿದು ಮೇಜಿನ ಡ್ರವರ್ ನೊಳಗೆ ಇದ್ದ 500 ರೂ. ಕಳವು ಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಲಾಗಿದೆ. ಜಿಲ್ಲಾ ನ್ಯಾಯಾಲ ಯದಲ್ಲಿ ಕಳವಿಗೆ ಯತ್ನಿಸುವ ವೇಳೆ ಅಲ್ಲಿನ ಸಿಸಿ ಟಿವಿ ಕ್ಯಾಮರಾದಲ್ಲಿ ಆರೋಪಿಯ ದೃಶ್ಯ ಮೂಡಿ ಬಂದಿತ್ತು. ಅದರ ಜಾಡು ಹಿಡಿದು ನಡೆಸಿದ ತನಿಖೆ ಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ.
ಮೇ 17ರಂದು ಸುಲ್ತಾನ್ ಬತ್ತೇರಿ ನ್ಯಾಯಾಲಯದ ರೆಕಾರ್ಡ್ ರೂಮ್ನ ಬಾಗಿಲು ಮುರಿದು ಒಳನುಗ್ಗಿ ಅಲ್ಲಿ ಕೇಸೊಂದಕ್ಕೆ ಸಂಬಂಧಿಸಿದ ನಾಲ್ಕು ಪವನ್ನ ಚಿನ್ನದ ಒಡವೆಗಳನ್ನು ಕದ್ದ ಆರೋಪಿಯೂ ಆಗಿದ್ದಾನೆ. ಈತನ ವಿರುದ್ಧ ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಾಗಿ 15ರಷ್ಟು ಕೇಸುಗಳಿವೆ ಎಂದು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಪಿ. ಬಿನೋಯ್ ತಿಳಿಸಿದ್ದಾರೆ.
ಗೂಗಲ್ ಮ್ಯಾಪನ್ನು ಉಪಯೋ ಗಿಸಿ ಆರೋಪಿ ಕಳವು ನಡೆಸುತ್ತಿದ್ದನು. ನ್ಯಾಯಾಲಯಗಳು, ಅಂಚೆ ಕಚೇರಿ ಮತ್ತು ಸರಕಾರಿ ಕಚೇರಿಗಳನ್ನು ಪ್ರಧಾನವಾಗಿ ಕೇಂದ್ರೀಕರಿಸಿ ಕಳವು ನಡೆಸುವುದು ಆರೋಪಿಯ ಕಳವಿನ ಇನ್ನೊಂದು ವಿಶೇಷತೆಯಾಗಿದೆ. ಕಳೆದ ಜುಲೈಯಲ್ಲಿ ನೀಲೇಶ್ವರ ಮೂನಾಂ ಕುಟ್ಟಿಯ ಬಿವರೇಜ್ ಕಾರ್ಪರೇ ಷನ್ನ ಮದ್ಯದಂಗಡಿಯ ಬೀಗ ಮುರಿದು 20,720 ರೂ. ಕಳವು ಗೈದ ಪ್ರಕರಣದಲ್ಲೂ ಬಂಧಿತನು ಆರೋಪಿಯಾಗಿದ್ದಾನೆ. ಅಲ್ಲಿನ ಸಿಸಿ ಟಿವಿ ಕ್ಯಾಮರಾದಲ್ಲೂ ಈತನ ದೃಶ್ಯ ಪತ್ತೆಯಾಗಿದೆ. ಏಳನೇ ತರಗತಿ ತನಕ ಮಾತ್ರ ಕಲಿತಿರುವ ಆರೋಪಿ 18ನೇ ವಯಸ್ಸಿನಲ್ಲೇ ಮೊದಲು ಕಳವು ನಡೆಸಿದ್ದನು. ಬಳಿಕ ಹಲವು ಕೇಸುಗಳಿಗೆ ಸಂಬಂಧಿಸಿ ಬಂಧಿತನಾಗಿ ಆತ ಸೆರೆಮನೆ ವಾಸವನ್ನೂ ಅನುಭವಿ ಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.