ಪಂಚಾಯತ್ ಅಧ್ಯಕ್ಷರ ಬೈಕ್ ಕಳವು
ಕಾಸರಗೋಡು: ಪಂಚಾಯತ್ ಕಚೇರಿಯ ಆವರಣದಲ್ಲಿ ನಿಲ್ಲಿಸಲಾಗಿದ್ದ ಪಂ. ಅಧ್ಯಕ್ಷರ ಬುಲ್ಲೆಟ್ ಬೈಕ್ ಕಳವುಗೈಯ್ಯಲಾಗಿದೆ. ಪಳ್ಳಿಕೆರೆ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ಕುಮಾರ್ರ ಬೈಕ್ ಈ ರೀತಿ ಕಳವುಗೈಯ್ಯಲಾಗಿದೆ.
ಇವರು ದ. ೨೯ರಂದು ಬೈಕನ್ನು ಪಂಚಾಯತ್ ಕಚೇರಿಯ ಆವರಣದೊಳಗೆ ನಿಲ್ಲಿಸಿದ್ದರು. ಬಳಿಕ ಅವರು ಎರಡು ದಿನ ಪಂಚಾಯತ್ ವಾಹನವನ್ನು ತಮ್ಮ ಅಧಿಕೃತ ಕಾರ್ಯಕ್ರಮಕ್ಕೆ ಉಪಯೋಗಿಸಿದ್ದರು. ಬಳಿಕ ಪಂಚಾಯತ್ ಕಚೇರಿ ಬಳಿ ಬಂದಾಗ, ಅಲ್ಲಿ ನಿಲ್ಲಿಸಲಾಗಿದ್ದ ಬೈಕ್ ನಾಪತ್ತೆಯಾಗಿತ್ತು. ಅದರಂತೆ ಅವರು ನೀಡಿದ ದೂರಿನಂತೆ ಬೇಕಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಕಳವುಗೈಯ್ಯಲ್ಪಟ್ಟ ಬೈಕ್ ಒಂದೂವರೆ ಲಕ್ಷ ರೂ. ಮೌಲ್ಯದ್ದಾಗಿದೆ ಎಂದೂ ದೂರಿನಲ್ಲಿ ತಿಳಿಸಲಾಗಿದೆ.