ಪಚ್ಚಂಬಳದಲ್ಲಿ ಚಿರತೆ ಪ್ರತ್ಯಕ್ಷ: ನಾಡಿನಲ್ಲಿ ಆತಂಕ

ಕುಂಬಳೆ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಪಚ್ಚಂಬಳಕ್ಕೆ ಚಿರತೆ ಬಂದಿರುವುದಾಗಿ ಹೇಳಲಾಗುತ್ತಿದೆ. ಪಚ್ಚಂಬಳದ ಕಾಂಡಲ್ ಎಂಬಲ್ಲಿನ ಅಬ್ದುಲ್ಲ ಬೇರಿಕೆ ಎಂಬವರ ಮನೆಯ ಸಿಸಿ ಕ್ಯಾಮರಾ ನಿನ್ನೆ ಸಂಜೆ ಪರಿಶೋಧಿಸಿದಾಗ ಮನೆಯ ಸಮೀಪದಲ್ಲಾಗಿ ಮೊನ್ನೆ ರಾತ್ರಿ ಚಿರತೆಯನ್ನು ಹೋಲುವ ಪ್ರಾಣಿ ನಡೆದು ಹೋಗುತ್ತಿರುವುದು ಕಂಡು ಬಂದಿದೆ. ಈ ವಿಷಯವನ್ನು ಕೂಡಲೇ  ವಾರ್ಡ್ ಪ್ರತಿನಿಧಿ ಮಜೀದ್ ಪಚ್ಚಂಬಳ ಅವರಿಗೆ ತಿಳಿಸಲಾಗಿದೆ. ಅವರು ಅರಣ್ಯಾಧಿಕಾಗಳು, ಪೊಲೀಸ್ ಹಾಗೂ ಗ್ರಾಮಾಧಿಕಾರಿ ಗಳಿಗೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಚಿರತೆ ಬಂದಿದೆಯೆಂಬ ಸುದ್ಧಿ ತಿಳಿದು ಜನರು ಆತಂಕಕ್ಕೊಳಗಾಗಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಕಂಡು ಬಂದ ಪ್ರಾಣಿ ಚಿರತೆಯೇ ಎಂದು ಅಧಿಕಾರಿಗಳು ತಲುಪಿದ ಬಳಿಕವಷ್ಟೇ ಖಚಿತಪಡಿಸಬೇಕಾಗಿದೆ. ಈ ಹಿಂದೆಯೂ ವಿವಿಧೆಡೆ ಚಿರತೆ ಕಂಡು ಬಂದಿದೆ ಎಂಬ ವದಂತಿಯಾಗಿದ್ದರೂ ಎಲ್ಲಿಂದಲೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ.

RELATED NEWS

You cannot copy contents of this page