ಪಜ್ಜ ಶ್ರೀ ಅಯ್ಯಪ್ಪ ಭಜನಾ ಮಂದಿರ ಪುನರ್ ನಿರ್ಮಾಣ: ವಿಜ್ಞಾಪನಾ ಪತ್ರ ಬಿಡುಗಡೆ
ಬದಿಯಡ್ಕ: ಆರಾಧನಾಲಯಗಳು ಕಾಲಕ್ಕನುಗುಣವಾಗಿ ಪುನರುತ್ಥಾನಗೊಳ್ಳು ವುದರಿಂದ ಸಾಮಾಜಿಕ ಏಕತೆ ಬೆಳೆ ಯುತ್ತದೆ. ಸಮಾಜದ ಎಲ್ಲಾ ವಿಭಾಗದ ಜನರು ಒಗ್ಗಟ್ಟಿನಿಂದ ಒಂದೆಡೆ ಸೇರುವಲ್ಲಿ ದೇವಾಲಯ, ಮಂದಿರಗಳು ಮಹತ್ತರ ಪಾತ್ರ ವಹಿಸುತ್ತವೆ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು. ಕೊಲ್ಲಂಗಾನ ಸಮೀಪ ಪಜ್ಜದಲ್ಲಿ ಪುನರ್ ನವೀಕರಣಗೊಳ್ಳುತ್ತಿರುವ ಶ್ರೀ ಅಯ್ಯಪ್ಪ ಸ್ವಾಮಿ ಭಜನಾಮಂದಿರದ ವಿಜ್ಞಾಪನಾ ಪತ್ರ ಶ್ರೀ ಮಠದಲ್ಲಿ ಬಿಡುಗಡೆಗೊಳಿಸಿ ಅವರು ಆಶೀರ್ವಚನ ನೀಡಿದರು.
ಮಂದಿರ ಪುನರ್ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಪ್ರೊ. ಎ. ಶ್ರೀನಾಥ್, ಸೇವಾ ಸಮಿತಿ ಅಧ್ಯಕ್ಷ ಪ್ರಮೋದ್ ಕುಮಾರ್ ಮೇಲತ್ತ್, ಕಾರ್ಯದರ್ಶಿ ಕೃಷ್ಣ ನಾಯ್ಕ ಅರಂತೋಡು, ಕೋಶಾಧಿಕಾರಿ ತೇಜಸ್ ಕುಮಾರ್ ಅರಂತೋಡು, ಮಂದಿರ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ತಿರುಮಲೇಶ್ವರ ಭಟ್ ಪಜ್ಜ, ಪ್ರಧಾನ ಕಾರ್ಯದರ್ಶಿ ವಾಮನ ನಾಯ್ಕ್, ಕೋಶಾಧಿಕಾರಿ ನವೀನ್ ಕುಮಾರ್, ವಾಸುದೇವ ನಾಯ್ಕ, ಶೇಷಪ್ಪ ನಾಯ್ಕ ಉಪಸ್ಥಿತರಿದ್ದರು. ಇದರಂಗವಾಗಿ ಮಂದಿರದಲ್ಲಿ ಗಣಪತಿ ಹವನ, ಭಜನೆ ನಡೆಯಿತು.