ಪಡಿತರ ಅಂಗಡಿ ಮಾಲಕ ನಿಧನ
ಕುಂಬ್ಡಾಜೆ: ಬದಿಯಡ್ಕ, ನೀರ್ಚಾಲು, ಕುಂಬಳೆಯಲ್ಲಿ ಪಡಿತರ ಅಂಗಡಿ ನಡೆಸುತ್ತಿದ್ದ ಅಗಲ್ಪಾಡಿ ಬೆದ್ರು ಕೂಡ್ಲು ನಿವಾಸಿ ಗೋಪಾಲ ಮಣಿಯಾಣಿ (59) ನಿಧನ ಹೊಂದಿದರು.
ಮೃತರು ಪತ್ನಿ ಸೀತಾ, ಮಕ್ಕಳಾದ ಸುನಿಲ್ ಕುಮಾರ್, ಸುಜಾತ, ಸಜಿತ, ಅಜಿತ, ವಿದ್ಯಾ, ಸೊಸೆ ನಿಷಾ, ಸಹೋದರರಾದ ಬಾಬು, ನಾರಾಯಣ, ಸುಧಾಮ, ಸಹೋದರಿಯರಾದ ಕುಸುಮ, ಲೀಲಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.