ಪಡ್ರೆ ಚಂದು ಸ್ಮಾರಕ ನಾಟ್ಯ ತರಬೇತಿ ಕೇಂದ್ರದಲ್ಲಿ ತೆಂಕಬೈಲು ಸ್ಮೃತಿ ಭವನ ಉದ್ಘಾಟನೆ ನಾಳೆ
ಪೆರ್ಲ: ಇಲ್ಲಿನ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಿದ ‘ತೆಂಕಬೈಲು ಸ್ಮೃತಿ ಭವನ’ದ ಉದ್ಘಾಟನಾ ಸಮಾರಂಭ ನಾಳೆ ಜರುಗಲಿದೆ. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಸ್ಮೃತಿಭವನ ಲೋಕಾರ್ಪಣೆಗೈಯುವರು ಎಂದು ಕೇಂದ್ರ ಸಂಚಾಲಕ ಹಾಗೂ ನಾಟ್ಯಗುರು ಸಬ್ಬಣಕೋಡಿ ರಾಮಭಟ್ ತಿಳಿಸಿದರು.
ನಾಳೆ ಬೆಳಗ್ಗೆ ಶಾರದಾ ಪ್ರತಿಷ್ಠೆ, 9.30ಕ್ಕೆ ಭಜನೆ ಹಾಗೂ 10.30ಕ್ಕೆ ಸ್ಮçತಿಭವನದ ಉದ್ಘಾಟನೆ ನಡೆಯಲಿದೆ. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡುವರು. ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಡಾ. ಟಿ. ಶ್ಯಾಮ ಭಟ್ ಅಧ್ಯಕ್ಷತೆ ವಹಿಸುವರು. ತೆಂಕು ತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ, ಹಿರಿಯ ವಕೀಲ ಎಂ. ನಾರಾಯಣ ಭಟ್, ರಾಜೇಂದ್ರ ಕಲ್ಲೂರಾಯ, ಅಶೋಕ್ ಪಂಡಿತ್, ತೆಂಕಬೈಲು ಮುರಳೀಕೃಷ್ಣ ಶಾಸ್ತಿç ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
11.30ರಿಂದ ಪೂರ್ವರಂಗ, ಮಧ್ಯಾಹ್ನ 1.30ಕ್ಕೆ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ ನಡೆಯುವುದು. 12ರಂದು ಬೆಳಗ್ಗೆ 9.30ಕ್ಕೆ ಶ್ರೀ ಶಾರದಾಪೂಜೆ, ಅಕ್ಷರಾಭ್ಯಾಸ, 11.30ಕ್ಕೆ ತಾಳಮದ್ದಳೆ, ಪೂರ್ವರಂಗ, ಮಧ್ಯಾಹ್ನ 1.30ರಿಂದ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ ನಡೆಯಲಿದೆ. ಈ ಬಗ್ಗೆ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರದ ಗೌರವಾಧ್ಯಕ್ಷ .ಎಕೆ ರಾಮಚಂದ್ರ ಭಟ್ ಪನೆಯಾಲ, ಖ್ಯಾತ ಪುಂಡುವೇಷಧಾರಿ ಶಿವಾನಂದ ಶೆಟ್ಟಿ ಬಜಕೂಡ್ಲು ಉಪಸ್ಥಿತರಿದ್ದರು.