ಪತಿ, ಪತ್ನಿ ವಿವಿಧೆಡೆ ಗುಂಡೇಟು ತಗಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಪಾಲಕ್ಕಾಡ್: ಪತಿ ಹಾಗೂ ಪತ್ನಿ ವಿವಿಧೆಡೆಗಳಲ್ಲಿ ಗುಂಡು ತಗಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಪಾಲಕ್ಕಾಡ್ ವಂಡಳಿಏರಾಟು ಕುಳಂಬ್‌ನ ಸುಂದರನ್ ಎಂಬವರ ಪುತ್ರ ಕೃಷ್ಣ ಕುಮಾರ್ (50) ಹಾಗೂ ಪತ್ನಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೃಷ್ಣ ಕುಮಾರ್ ವಂಡಳಿಯ ಮನೆ ಅಂಗಳದಲ್ಲಿ, ಅವರ ಪತ್ನಿ ಕೊಯಂಬತ್ತೂರಿನಲ್ಲಿರುವ ಮನೆಯಲ್ಲಿ ಗುಂಡೇಟು ತಗಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ ಯಾಗಿದ್ದಾರೆ.
ಕೊಯಂಬತ್ತೂ ರಿನಲ್ಲಿರುವ ಪತ್ನಿಯನ್ನು ಗುಂಡಿಕ್ಕಿ ಕೊಲೆಗೈದ ಬಳಿಕ ಪಾಲಕ್ಕಾಡ್ ವಂಡುಳಿಯ ಮನೆಗೆ ತಲುಪಿ ಕೃಷ್ಣ ಕುಮಾರ್ ಸ್ವಯಂ ಗುಂಡು ಹಾರಿಸಿಕೊಂಡಿರಬಹುದೆಂದು ಅಂದಾಜಿಸಲಾಗಿದೆ.