ಪತ್ನಿಯನ್ನು ಕೊಲೆಗೈಯ್ಯಲು ಯತ್ನಿಸಿದ ಪತಿ ಸೆರೆ
ಕಾಸರಗೋಡು: ಪತ್ನಿಯನ್ನು ಕಡಿದು ಕೊಲ್ಲಲು ಹಾಗೂ ತಡೆಯಲು ಬಂದ ಅತ್ತೆ, ನಾದಿನಿಯನ್ನು ಆಕ್ರಮಿಸಿದ ಪ್ರಕರಣದಲ್ಲಿ ಪತಿ ಸೆರೆಯಾಗಿದ್ದಾನೆ. ಚೆರ್ಕಳ ಇಂದಿರಾ ನಗರ ಕ್ವಾರ್ಟರ್ಸ್‌ನಲ್ಲಿ ವಾಸವಾಗಿ ರುವ ಮನೋಜ್ (47)ನನ್ನು ಹೊಸದುರ್ಗ ಪೊಲೀಸರು ಚೆರ್ಕಳ ದಿಂದ ಸೆರೆಹಿಡಿದಿದ್ದಾರೆ. ಪುದುಕೈ ಭೂದಾನಂ ನಿವಾಸಿ ಎ.ಎಂ. ಶಾರೀಕ (39), ತಾಯಿ, ನಾದಿನಿಯನ್ನು ಆಕ್ರಮಿಸಿದ ಪ್ರಕರಣದಲ್ಲಿ ಈತನನ್ನು ಸೆರೆಹಿಡಿಯಲಾಗಿದೆ. ಪತಿಯ ಜೊತೆ ಇಂದಿರಾನಗರದ ಕ್ವಾರ್ಟರ್ಸ್‌ಗೆ ತೆರಳದ ದ್ವೇಷದಿಂದ ಇರಿದು ಕೊಲೆಗೈಯ್ಯಲು ಯತ್ನಿಸಿರುವುದಾಗಿ ಹೊಸದುರ್ಗ ಪೊಲೀಸರು ದಾಖಲಿಸಿದ ಪ್ರಕರಣದಲ್ಲಿ ತಿಳಿಸಲಾಗಿದೆ.