ಪತ್ನಿಯ ಬೆನ್ನಲ್ಲೇ ಪತಿ ಹೃದಯಾಘಾತದಿಂದ ನಿಧನ

ಕಾಸರಗೋಡು: ಪತ್ನಿ ಮೃತಪಟ್ಟ ತಿಂಗಳು ಕಳೆದಾಗ ಪತಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಕೂಡ್ಲುನಲ್ಲಿ ಸಂಭವಿಸಿದೆ. ಇಲ್ಲಿನ ಕಾಳ್ಯಂಗಾಡ್ ಜಗದಂಬಾ ದೇವಸ್ಥಾನದ ಸಮೀಪದ ವಿಶ್ವನಾಥ (79) ಬುಧವಾರ ರಾತ್ರಿ ಮೃತಪಟ್ಟಿದ್ದಾರೆ. ಮನೆಯಲ್ಲಿ ಕುಸಿದು ಬಿದ್ದ ಇವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ವಿಶ್ವನಾಥರ ಪತ್ನಿ ಅಂಗಾರೆ ಜೂನ್ 10ರಂದು ನಿಧನ ಹೊಂದಿದ್ದರು. ಮೃತರು ಮಕ್ಕಳಾದ ಕೃಷ್ಣನ್, ನಾರಾಯಣನ್, ಐತ್ತಪ್ಪ, ಶೇಖರನ್, ಸೊಸೆಯಂದಿರಾದ ಮೀನಾಕ್ಷಿ, ಸುಮಿತ್ರ, ಸಹೋದರಿ ಯಶೋಧ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page