ಪ್ರಧಾನಿ ಮೋದಿ, ತಾಯಿಯನ್ನು ಅವಹೇಳನಗೈದ ಜಾನ್ ಮಣಿದಾಸ್ ವಿರುದ್ಧ ವಿವಿಧ ಕಡೆಗಳಲ್ಲಿ ಖಂಡನೆ, ದೂರು ದಾಖಲು

ಕುಂಬಳೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ನಿಧನ ಹೊಂದಿದ ಅವರ ತಾಯಿಯ ಬಗ್ಗೆ ಅವಮಾನಕರ ವಾದ ರೀತಿಯಲ್ಲಿ ಅವಹೇಳನಗೈದ ಜಾನ್ ಮಣಿದಾಸ್ ವಿರುದ್ಧ ಕೇಸು ದಾಖಲಿಸಬೇಕೆಂದು ಬಿಜೆಪಿ ಕುಂಬಳೆ ಮಂಡಲ ಸಮಿತಿ ಕುಂಬಳೆ ಪೊಲೀ ಸರಲ್ಲಿ ಆಗ್ರಹಿಸಿದೆ. ಮಂಡಲ ಅಧ್ಯಕ್ಷ ವಿಕ್ರಮ್ ಪೈ, ರಾಜ್ಯ ಮುಖಂಡರಾದ ವಿ. ರವೀಂದ್ರನ್, ಸತೀಶ್ಚಂದ್ರ ಭಂಡಾರಿ, ಒಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಕೆ.ಪಿ. ವಲ್ಸರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಮುಜುಂ ಗಾವು, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಪ್ರೇಮಲತಾ ಎಸ್, ಮಂಡಲ ಉಪಾಧ್ಯಕ್ಷೆ ಪ್ರೇಮಾವತಿ,ಅಜಿತ್ ಕುಮಾರ್, ಶಿವಪ್ರಸಾದ್ ರೈ, ಸುಜಿತ್ ರೈ, ಬಾಲಕೃಷ್ಣ ಅಂಬಾರ್, ಪಂಚಾಯತ್  ಸದಸ್ಯರಾದ ರಮೇಶ್ ಭಟ್, ಕಾಂಚಾರ, ಶಾರದಾ,  ಭಾಗವಹಿಸಿದರು.

ಮಂಜೇಶ್ವರ: ಪ್ರಧಾನ ಮಂತ್ರಿ ನರೇಂದ್ರ ಮೋದಿ, ತಾಯಿ ವಿರುದ್ಧ ನಿಂಧನೆಗೈದ ಜಾನ್ ಮಣಿದಾಸ್‌ನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಮಂಜೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದೆ. ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಶಶಿಕಲಾ ಮಾಡ, ಜ್ಯೋತಿಪ್ರಕಾಶ್, ರಮಾದೇವಿ, ನಳಿನಿ ಮಂಜೇಶ್ವರ, ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ಮುಖಂಡರಾದ ಹರೀಶ್ಚಂದ್ರ ಎಂ, ಯಾದವ ಬಡಾಜೆ, ರಾಜೇಶ್ ಮಜಲು, ಜಯರಾಮ್ ಕುಳೂರು ಭಾಗವಹಿಸಿದರು.

ಬದಿಯಡ್ಕ: ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಅವರ ತಾಯಿ ಬಗ್ಗೆ ಅವಹೇಳನ ಹೇಳಿಕೆಗಳನ್ನು ಪ್ರಕಟಿಸಿದ ವ್ಯಕ್ತಿಯ ವಿರುದ್ಧ ಬದಿಯಡ್ಕ ಮಹಿಳಾ ಮೋರ್ಚಾ ವತಿಯಿಂದ ಬದಿಯಡ್ಕ ಠಾಣೆಗೆ ದೂರು ನೀಡಲಾಯಿತು. ಪಂಚಾಯತ್ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ, ಜಯಂತಿ ಚೆಟ್ಟಿಯಾರ್, ಪ್ರೇಮ ಬೇಳ, ಜಗದಂಬಾ, ಪುಷ್ಪ, ಹರಿಣಾಕ್ಷಿ ಉಪಸ್ಥಿತರಿದ್ದರು.

RELATED NEWS

You cannot copy contents of this page