ಬೆಳ್ಳೂರು: ಧಾರಾಕಾರ ಮಳೆಯಿಂದ ಮನೆಯೊಂದರ ಸಮೀಪದ ಗೋಡೆ ಕುಸಿದುಬಿದ್ದು ಮನೆ ಅಪಾಯ ಭೀತಿಯನ್ನು ಎದುರಿಸುತ್ತಿದೆ. ಗೋಳಿಕಟ್ಟೆ ಬಳಿಯ ಕಜಮುಂಡ ಎಂಬಲ್ಲಿನ ಮೀನಾಕ್ಷಿ ಎಂಬವರ ಕಾಂಕ್ರೀಟ್ ಮನೆ ಅಪಾಯಭೀತಿಯಲ್ಲಿದೆ. ನಿನ್ನೆ ಬೆಳಿಗ್ಗೆ ಸುರಿದ ಮಳೆ ವೇಳೆ ಮನೆಯ ಅಂಗಳದ ಕೆಳಭಾಗಕ್ಕೆ ಕಟ್ಟಿದ ಕೆಂಪುಕಲ್ಲಿನ ಗೋಡೆ ಸಂಪೂರ್ಣ ಕುಸಿದುಬಿದ್ದಿದೆ. ಇದರಿಂದ ಮನೆಯ ಒಂದು ಭಾಗ ವಾಲಿ ನಿಂತಿದೆ. ಇದ ರಿಂದ ಕುಟುಂಬ ಆತಂಕಕ್ಕೀಡಾಗಿದೆ.






