ಪತ್ರಿಕೆ ಮಾರಾಟಗಾರ ನಿಧನ
ಕಾಸರಗೋಡು: ಹಲವು ವರ್ಷಗಳ ಕಾಲ ಕಾಸರಗೋಡಿನ ವಿವಿಧ ಪತ್ರಿಕೆಗಳ ಮಾರಾಟ ಗಾರನಾಗಿದ್ದ, ಸಕ್ರಿಯ ಸುನ್ನಿ ಕಾರ್ಯಕರ್ತ ಸಿರಾಜ್ ಪುಳ್ಕೂರು (45) ನಿಧನ ಹೊಂದಿದರು. ಕಳೆದ ಕೆಲವು ಸಮಯಗಳಿಂದ ಅಸೌಖ್ಯ ತಗಲಿ ಕಾಸರಗೋಡಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಎಸ್‌ಎಸ್‌ಎಫ್ ಪುಳ್ಕೂರು ಘಟಕ ಜೊತೆ ಕಾರ್ಯದರ್ಶಿ, ಎಸ್‌ವೈಎಸ್ ಮಧೂರು ಪಂಚಾಯತ್ ಸಮಿತಿ ಸದಸ್ಯ, ಎಸ್‌ವೈಎಸ್ ಸರ್ಕಲ್ ಸಮಿತಿ ಸದಸ್ಯನಾಗಿ ದುಡಿದಿದ್ದರು. ಕೇರಳ ಮುಸ್ಲಿಂ ಜಮಾಯತ್ ಪುಳ್ಕೂರು ಸಮಿತಿಯ ಸದಸ್ಯನಾಗಿ ದ್ದರು. ದಿ| ಮುಹಮ್ಮದ್- ಮರಿಯಮ್ಮ ದಂಪತಿಯ ಪುತ್ರನಾಗಿದ್ದಾರೆ. ಮೃತರು ಸಹೋದರರಾದ ಅಬ್ದುಲ್ಲ, ಅಬ್ದುಲ್ ಹಮೀದ್, ಮೂಸ, ಇಬ್ರಾಹಿಂ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.