ಪಾನ್ಮಸಾಲೆ ಸಹಿತ ಸೆರೆ
ಮಂಜೇಶ್ವರ: ಪಾನ್ ಮಸಾಲೆ ಕೈವಶವಿರಿಸಿಕೊಂಡಿದ್ದ ಇಬ್ಬರನ್ನು ಮಂಜೇಶ್ವರ ಎಸ್ಐ ರಮೇಶ್ ಸೆರೆ ಹಿಡಿದಿದ್ದಾರೆ. ಮೀಯಪದವು ನಿವಾಸಿ ಅಬೂಬಕರ್ (೪೯)ನನ್ನು ನಿನ್ನೆ ರಾತ್ರಿ ೨೯ ಪ್ಯಾಕೆಟ್ ಪಾನ್ ಮಸಾಲೆ ಸಹಿತ ಸೆರೆ ಹಿಡಿಯ ಲಾಗಿದೆ. ಬಾಯಿಕಟ್ಟೆ ನಿವಾಸಿ ಅಬ್ದುಲ್ಲ (೮೦)ನನ್ನು ನಿನ್ನೆ ಮಧ್ಯಾಹ್ನ ೬೪ ಪ್ಯಾಕೆಟ್ ಪಾನ್ಮಸಾಲೆ ಸಹಿತ ಬೇಕೂರಿನಿಂದ ಸೆರೆ ಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಂಬಳೆ: ಪಾನ್ ಮಸಾಲೆ ಕೈವಶವಿರಿಸಿಕೊಂಡ ಓರ್ವನನ್ನು ಕುಂಬಳೆ ಎಸ್ಐ ಗಣೇಶ್ ಬಂಧಿಸಿದ್ದಾರೆ.
ಪುತ್ತಿಗೆ ಕಯ್ಯಾಂಕೂಡ್ಲು ನಿವಾಸಿ ಮೊಹಮ್ಮದ್ ಅರ್ಶಾದ್ (೩೫)ನನ್ನು ೫೦ ಪ್ಯಾಕೆಟ್ ಪಾನ್ ಮಸಾಲೆ ಸಹಿತ ಪುತ್ತಿಗೆ ಎ.ಕೆ.ಜಿ. ನಗರದಿಂದ ಸೆರೆ ಹಿಡಿಯಲಾಗಿದೆ.