ಪಾನ್ ಮಸಾಲೆ ಸಹಿತ ಓರ್ವ ಸೆರೆ
ಕುಂಬಳೆ: ನಿಷೇಧಿತ ೬೩ ಪ್ಯಾಕೆಟ್ ಪಾನ್ ಮಸಾಲೆ ಸಹಿತ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಬಂಬ್ರಾಣ ಕಲ್ಕುಳ ನಿವಾಸಿ ಮೊಹಮ್ಮದ್ (೫೨) ಬಂಧಿತ ವ್ಯಕ್ತಿ. ಕುಂಬಳೆ ಎಸ್.ಐ ಉಮೇಶ್ ನೇತೃತ್ವದ ಪೊಲೀಸರು ನಿನ್ನೆ ಬಂಬ್ರಾಣ ಜಂಕ್ಷನ್ನಲ್ಲಿ ಕಾರ್ಯಾ ಚರಣೆ ನಡೆಸುತ್ತಿದ್ದಾಗ ಅಲ್ಲಿನ ರಸ್ತೆ ಬದಿ ಪಾನ್ ಮಸಾಲೆ ಸಹಿತ ನಿಂತಿದ್ದ ಮೊಹಮ್ಮದ್ನನ್ನು ಬಂಧಿಸಿರುವು ದಾಗಿ ಪೊಲೀಸರು ತಿಳಿಸಿದ್ದಾರೆ.