ಪಾನ್ ಮಸಾಲೆ ಸಹಿತ ನಾಲ್ಕು ಮಂದಿ ಸೆರೆ
ಬದಿಯಡ್ಕ: ಬದಿಯಡ್ಕ ಪೊಲೀಸರು ನಿನ್ನೆ ವಿವಿಧೆಡೆ ನಡೆಸಿದ ಕಾರ್ಯಾಚರಣೆಯಲ್ಲಿ ನಿಷೇಧಿತ ಪಾನ್ ಮಸಾಲೆ ವಶಪಡಿಸಿ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ. ನೀರ್ಚಾಲು ಪೇಟೆಯಲ್ಲಿ 55 ಪ್ಯಾಕೆಟ್ ಪಾನ್ ಮಸಾಲೆ ಸಹಿತ ವಿದ್ಯಾಗಿರಿ ಬಜೆಯ ಅಬ್ದುಲ್ಲ ಕುಂಞಿ (47) ಎಂಬಾತನನ್ನು ಬಂಧಿಸಲಾ ಗಿದೆ. ಏಣಿಯರ್ಪು ಬಸ್ ತಂಗುದಾಣ ಬಳಿಯಿಂದ ವಿದ್ಯಾಗಿರಿ ಕಡಾರುವಿನ ಪ್ರಸಾದ್ ಶೆಟ್ಟಿ (46)ಎಂಬಾತನ ಕೈಯಿಂದ 85 ಪ್ಯಾಕೆಟ್, ಕೊಲ್ಲಂ ಗಾನ ಬಸ್ ನಿಲ್ದಾಣ ಬಳಿಯಿಂದ ಕೊಲ್ಲಂಗಾನದ ಮಹಾಲಿಂಗ ಪಾಟಾಳಿ (57) ಕೈಯಿಂದ 75 ಪ್ಯಾಕೆಟ್, ಬದಿಯಡ್ಕ ಪೇಟೆಯಲ್ಲಿ ಮೂಕಂಪಾರೆಯ ಪದ್ಮನಾಭ (56) ಎಂಬಾತನ ಕೈಯಿಂದ ೪೮ ಪ್ಯಾಕೆಟ್ ಪಾನ್ ಮಸಾಲೆ ವಶಪಡಿಸಿ ಅವರನ್ನು ಬಂಧಿಸಲಾಗಿದೆ.