ಪಿಕ್ಅಪ್ ವಾಹನ ಟ್ರಾನ್ಸ್ಫಾರ್ಮರ್ಗೆ ಢಿಕ್ಕಿ
ಕುಂಬಳೆ: ಪಿಕ್ಅಪ್ ವಾಹನ ವಿದ್ಯುತ್ ಟ್ರಾನ್ಸ್ಫಾರ್ಮರ್ಗೆ ಢಿಕ್ಕಿ ಹೊಡೆದಿದ್ದು ಅದೃಷ್ಟವಶಾತ್ ಭಾರೀ ಅಪಾಯ ತಪ್ಪಿ ಹೋಗಿದೆ. ಇಂದು ಬೆಳಿಗ್ಗೆ 6 ಗಂಟೆಗೆ ಬಾಡೂರು ಜಂಕ್ಷನ್ನಲ್ಲಿ ಅಪಘಾತ ಸಂ ಭವಿಸಿದೆ. ಬಾಡೂರು ಭಾಗದಿಂದ ಸೀತಾಂ ಗೋಳಿಯತ್ತ ಸಾಗುತ್ತಿದ್ದ ವಾಹನ ನಿಯಂತ್ರಣ ತಪ್ಪಿ ಟ್ರಾನ್ಸ್ಫಾರ್ಮರ್ಗೆ ಢಿಕ್ಕಿ ಹೊಡೆದಿದೆ. ವಾಹನದಲ್ಲಿದ್ದ ಬಂಬ್ರಾಣ ನಿವಾಸಿಗಳಾದ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ. ಘಟನೆ ವೇಳೆ ಆ ಸ್ಥಳದಲ್ಲಿ ಜನಸಂಚಾರ ಕಡಿಮೆಯಿದ್ದುದರಿಂದ ಅಪಾಯ ತಪ್ಪಿದೆ. ಘಟನೆಯಿಂದ ಈ ಪರಿಸರದಲ್ಲಿ ವಿದ್ಯುತ್ ಮೊಟಕುಗೊಂಡಿದೆ.