ಪುಂಡಿಕಾಯಿಯಲ್ಲಿ ನವೀಕೃತ ರಸ್ತೆಗಳ ಉದ್ಘಾಟನೆ
ಮುಳ್ಳೇರಿಯ: ಕಾರಡ್ಕ ಪಂಚಾಯತ್‌ನ ಎರಡನೇ ವಾರ್ಡ್ ಪುಂಡಿಕಾಯಿಯಲ್ಲಿ ನವೀಕರಿಸಿದ ಎರಡು ರಸ್ತೆಗಳ ಉದ್ಘಾಟನೆ ನಿನ್ನೆ ಜರಗಿತು. ಬ್ಲೋಕ್ ಪಂಚಾಯತ್‌ನ ಜನರಲ್ ಫಂಡ್, ಎಸ್‌ಸಿ ನಿಧಿ ಉಪಯೋಗಿಸಿ ನಿರ್ಮಿಸಿದ ರಸ್ತೆಯನ್ನು ಕಾರಡ್ಕ ಬ್ಲೋಕ್ ಪಂಚಾಯತ್ ಅಧ್ಯಕ್ಷ ಸಿಜಿ ಮ್ಯಾಥ್ಯು ಉದ್ಘಾಟಿಸಿದರು. ಕಾರಡ್ಕ ಪಂಚಾಯ ತ್‌ನ ಎಂ.ಜಿ.ಎನ್.ಆರ್.ಇ.ಜಿ.ಎ ಯೋಜನೆ ಯಂತೆ ನವೀಕರಿಸಿದ ರಸ್ತೆಯನ್ನು ವಾರ್ಡ್ ಪ್ರತಿನಿಧಿ ಪುಷ್ಪಾ ಸುರೇಶ್ ಉದ್ಘಾಟಿಸಿದರು. ಕಾರ್ಯಕ್ರಮಗಳಲ್ಲಿ ಮುಂಡೋಳು ಕ್ಷೇತ್ರದ ಆಡಳಿತ ಮೊಕ್ತೇಸರ ರಘುರಾಮ್ ಬಲ್ಲಾಳ್ ಎ.ಬಿ, ವಸಂತ ಕುಮಾರ್ ಕಾರ್ಲೆ, ಕಾರಡ್ಕ ಬ್ಲೋಕ್ ಪಂ. ಸದಸ್ಯೆ ನಳಿನಿ, ಪಂ. ಸದಸ್ಯೆ ಪುಷ್ಪ ಹಾಗೂ ರಸ್ತೆಯ ಫಲಾನುಭವಿಗಳಲ್ಲಿ ಕೆಲವರು ಉಪಸ್ಥಿತರಿದ್ದರು.