ಪುತ್ತಿಗೆ ಪಂಚಾಯತ್: ನೂತನ ಕಾಂಕ್ರೀಟ್ ರಸ್ತೆ ನಾಡಿಗೆ ಸಮರ್ಪಣೆ
ಪುತ್ತಿಗೆ: ಪಂಚಾಯತ್ ವ್ಯಾಪ್ತಿಯ ಬಾಡೂರು ನಾಲ್ಕನೇ ವಾರ್ಡ್‌ಗೊಳ ಪಟ್ಟ ಬಾಡೂರು ಕಿದಾರು ನೂತನ ಕಾಂಕ್ರೀಟ್ ರಸ್ತೆಯನ್ನು ಪಂಚಾಯತ್ ಅಧ್ಯಕ್ಷ ಡಿ. ಸುಬ್ಬಣ್ಣ ಆಳ್ವ ಉದ್ಘಾಟಿ ಸಿದರು. ವಾರ್ಡ್ ಪ್ರತಿನಿಧಿ ಅನಿತಾ ಎಂ. ಅಧ್ಯಕ್ಷತೆ ವಹಿಸಿದರು. ಕೆ. ನಾರಾಯಣ ಬಾಡೂರು ಸ್ವಾಗತಿಸಿದರು. ಬಳಿಕ ರಾಮಕೃಷ್ಣ ಶೆಟ್ಟಿ ಕಿದಾರು ಸ್ಥಳೀಯರ ಪರವಾಗಿ ಪಂಚಾಯತ್ ಅಧ್ಯಕ್ಷ ಡಿ. ಸುಬ್ಬಣ್ಣ ಆಳ್ವ ಹಾಗೂ ಸದಸ್ಯೆ ಅನಿತಾ ಎಂ.ರನ್ನು ಗೌರವಿಸಿದರು.