ಪುತ್ರನ ವಿವಾಹ ಚಪ್ಪರ ಸಿದ್ಧತೆ ಮಧ್ಯೆ ಕುಸಿದು ಬಿದ್ದು ತಂದೆ ನಿಧನ
ಬೆದ್ರಡ್ಕ: ಪುತ್ರನ ವಿವಾಹಕ್ಕಾಗಿ ತಂದೆ ಚಪ್ಪರ ಸಿದ್ಧಪಡಿಸುತ್ತಿದ್ದಂತೆ ಕೃಷಿ ಕಾರ್ಮಿಕ ಕುಸಿದು ಬಿದ್ದು ಮೃತ ಪಟ್ಟರು. ಬೆದ್ರಡ್ಕ ರಾಜೀವ್ ದಶಲಕ್ಷ ಕಾಲನಿ ಹೌಸ್ನ ಉಡುವ ಮುಹಮ್ಮದ್ ಕುಂಞಿ (62) ಮೃತಪಟ್ಟವರು. ನಾಳೆ ವಿವಾಹ ನಡೆಯಲಿದ್ದು, ಈ ಮಧ್ಯೆ ಉಂಟಾದ ಸಾವು ಕುಟುಂಬ ಹಾಗೂ ಸ್ಥಳೀಯರಲ್ಲಿ ಶೋಕ ಸೃಷ್ಟಿಸಿದೆ.
ಮೃತರು ಪತ್ನಿ ಮರಿಯಮ್ಮ, ಮಕ್ಕಳಾದ ಮಿರ್ಶಾ, ಬಾಸಿತ್, ರುಬೀನ, ಮಿಸ್ರಿಯ, ಆಯಿಷ, ಅಳಿಯಂದಿರಾದ ಶರೀಫ್, ಅಬ್ಬಾಸ್, ರಿಯಾಸ್, ಸಹೋದ ರರಾದ ಖಾದರ್, ಕುಂಞಾಲಿ, ಉಂಬು, ಸಹೋದರಿಯರಾದ ರುಖಿಯ, ಫಾತಿಮ, ಆಯಿಷ, ದೈನಾಬಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.