ಪುಳ್ಕೂರು ಕ್ಷೇತ್ರದಲ್ಲಿ ಕಾರ್ತಿಕ ದೀಪೋತ್ಸವ ನ. 2ರಿಂದ: ಆಮಂತ್ರಣ ಬಿಡುಗಡೆ
ಸಿರಿಬಾಗಿಲು: ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ನವಂಬರ್ 2ರಿಂದ ಡಿಸೆಂಬರ್ ೨ರವರೆಗೆ ಜರಗಲಿದೆ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರದ ಪ್ರಧಾನ ಅರ್ಚಕ ಪ್ರಭಾಕರ ಕಾರಂತ ಬಿಡುಗಡೆಗೊ ಳಿಸಿದರು. ಕ್ಷೇತ್ರದ ಆಡಳಿತ ಸೇವಾ ಸಮಿತಿ ಅಧ್ಯಕ್ಷ ಶೀನ ಶೆಟ್ಟಿ ಕಜೆ, ಆಡಳಿತ ಸೇವಾ ಸಮಿತಿಯ ಕಾರ್ಯದರ್ಶಿ ಮೋಹನ್ ಕುಮಾರ್ ಶೆಟ್ಟಿ ಸಿರಿಬಾಗಿಲು, ಕಾರ್ಯಕ್ರಮದ ಯಶಸ್ವಿಗೆ ಕರೆ ನೀಡಿದರು. ಆಹ್ವಾನಿತ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ, 8.30ಕ್ಕೆ ಮಹಾಮಂಗ ಳಾರತಿ ನಂತರ ಅನ್ನಸಂತರ್ಪಣೆ ನಡೆಯಲಿದೆ. ಸ್ಥಳೀಯ ಸಂಘ-ಸಂಸ್ಥೆಗಳು ಪ್ರತಿನಿತ್ಯ ಸಂಜೆ ೫ ಗಂಟೆಗೆ ಮುಂಚಿತವಾಗಿ ಕ್ಷೇತ್ರಕ್ಕೆ ತಲುಪಿ ಸ್ವಯಂ ಸೇವೆಯಲ್ಲಿ ಸಹಕರಿಸ ಬೇಕಾಗಿ ವಿನಂತಿ ಮಾಡಲಾಯಿತು. ಆಮಂತ್ರಣ ಪತ್ರಿಕೆಗಳನ್ನು ಪ್ರತಿ ಮನೆಗಳಿಗೂ ವಿತರಿಸಲು ಪ್ರತ್ಯೇಕ ತಂಡಗಳನ್ನು ರಚಿಸಲಾಯಿತು. ಸಭೆಯಲ್ಲಿ ಸಮಿತಿಯ ಉಪಾಧ್ಯಕ್ಷ ಕೃಷ್ಣ ಹೊಳ್ಳ ನೀರಾಳ, ಕೋಶಾಧಿ ಕಾರಿಗಳಾದ ಗಣೇಶ್ ಶೆಟ್ಟಿ ಹಳೆಮನೆ, ಕುಮಾರ್ ಕೆ.ಎಲ್. ಪೆರಿಯಡ್ಕ, ಜೊತೆ ಕಾರ್ಯದರ್ಶಿ ಗಣೇಶ್ ಭಂ ಡಾರಿ ಮಾಯಿಪ್ಪಾಡಿ, ಸದಸ್ಯರಾದ ಅರವಿಂದ ಶೆಟ್ಟಿ, ಸುರೇಶ್ ಶೆಟ್ಟಿ ಮಾಯಿಪ್ಪಾಡಿ, ಉಮೇಶ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಉಡುವ, ಕಿಟ್ಟಣ್ಣ ಶೆಟ್ಟಿ ಬೇರ, ನಿತೀಶ್ ಆಳ್ವ ಪುಳ್ಕೂರು, ಸುಜಾತ ಶೆಟ್ಟಿ ಪುಳ್ಕೂರು, ವಾಣಿ ಶೆಟ್ಟಿ ಬೇರ, ಸುಜೇಶ್ ಶೆಟ್ಟಿ ನೀರಾಳ ಹಾಗೂ ಕಾರ್ಯಾಲಯದ ಸಹಾಯ ಕರಾದ ಚಂದ್ರಹಾಸ ಶೆಟ್ಟಿ ಪುಳ್ಕೂರು ಮೊದಲಾದವರು ಹಾಜರಿದ್ದರು.