ಪುಸ್ತಕ ಮುದ್ರಣ: ಟೆಂಡರ್ ಆಹ್ವಾನ
ಕಾಸರಗೋಡು: ಜಿಲ್ಲಾ ಪಂಚಾಯತ್ನ 2023-24ನೇ ವಾರ್ಷಿಕ ಯೋಜನೆಯಲ್ಲಿ ಸೇರಿಸಿ ಡಿಜಿಟಲ್ ಸಾಕ್ಷರತಾ ಯೋಜನೆ ಪ್ರಕಾರ ಕಲಿಕೆದಾರರಿಗೆ ನೀಡಲಿರುವ ಕರಪಿಡಿಯನ್ನು ಮಲಯಾಳ ಹಾಗೂ ಕನ್ನಡದಲ್ಲಿ ಮುದ್ರಿಸಲು ಪ್ರಿಂಟಿAಗ್ ಪ್ರೆಸ್ ಮಾಲಕರಿಂದ, ಸರಕಾರಿ ಸಂಸ್ಥೆಗಳಿAದ ಟೆಂಡರ್ ಆಹ್ವಾನಿಸಲಾಗಿದೆ. ಮಲೆಯಾಳದಲ್ಲಿ 75000 ಪ್ರತಿ, ಕನ್ನಡದಲ್ಲಿ 25000 ಪ್ರತಿಗಳು ಅಗತ್ಯವಿದೆ. ಕನ್ನಡಕ್ಕೆ ಭಾಷಾಂತರವನ್ನು ಕೂಡಾ ಟೆಂಡರ್ ಪಡೆಯುವ ಸಂಸ್ಥೆ ನಿರ್ವಹಿಸಬೇಕು. ಮೇ 24ರಂದು ಮಧ್ಯಾಹ್ನ 12 ಗಂಟೆವರೆಗೆ ಟೆಂಡರ್ ಸ್ವೀಕರಿಸಲಾಗುವುದು. ಅಂದು ಸಂಜೆ 3 ಗಂಟೆಗೆ ಟೆಂಡರ್ ತೆರೆಯಲಾಗುವುದು. 04994 256722ರಿಂದ ಹೆಚ್ಚಿನ ಮಾಹಿತಿ ಲಭಿಸುವುದು.