ಪೆನ್ಶನರ್ಸ್ ಮಹಾಸಂಘದಿಂದ ಪೆನ್ಶನ್ ದಿನಾಚರಣೆ
ಕಾಸರಗೋಡು: ಭಾರತೀಯ ಪೆನ್ಶನರ್ಸ್ ಮಹಾಸಂಘದ ಜಿಲ್ಲಾ ಸಮಿತಿ ಆಶ್ರಯದಲ್ಲಿ ಪೆನ್ಶನ್ ದಿನ ಆಚರಿಸಲಾಯಿತು. ಚಂದ್ರಗಿರಿ ದೇವಸ್ಥಾನದ ಪರಿಸರದಲ್ಲಿ ನಡೆದ ಸಭೆಯನ್ನು ಸಂಘದ ರಾಜ್ಯ ಸಮಿತಿ ಕಾರ್ಯದರ್ಶಿ ಸಿ.ಕೆ. ಉಮಾದೇವಿ ದೀಪ ಬೆಳಗಿಸಿ ಉದ್ಘಾಟಿಸಿದರು. ರಾಷ್ಟ್ರೀಯ ಅಧ್ಯಕ್ಷ ಸಿ.ಎಚ್. ಸುರೇಶ್ ಮಾತನಾಡಿದರು. ಜಿಲ್ಲಾ ಅಧ್ಯಕ್ಷ ಎಂ. ಬಾಲಕೃಷ್ಣ ಅಧ್ಯಕ್ಷತೆ ವಹಿಸಿದರು. ಚಂದು, ಸದಾನಂದ, ಗೋಪಾಲನ್, ಸಿ.ಎಚ್. ಜಯೇಂದ್ರ, ಎ. ಮುರಳೀಧರನ್ ಮಾತನಾಡಿದರು.