ಪೆರಡಾಲದಲ್ಲಿ ವಸಂತ ವೇದಪಾಠ ಶಿಬಿರ ಆರಂಭ
ಬದಿಯಡ್ಕ: ಕಾಸರಗೋಡು ಮತ್ತು ಹೊಸದುರ್ಗ ಹೈವ ಬ್ರಾಹ್ಮಣ ಸಭಾದ ವತಿಯಿಂದ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ವಸಂತ ವೇದಪಾಠ ಶಿಬಿರ ಆರಂಭಗೊಂಡಿತು. ವೇದಮೂರ್ತಿ ಕೋಡಿಯಡ್ಕ ಶಿವರಾಂ ಭಟ್ ಪ್ರಸ್ತಾಪಿಸಿದರು. ನಿಕಟಪೂರ್ವ ಅಧ್ಯಕ್ಷ ಕುಳಮರ್ವ ಶಂಕರನಾರಾ ಯಣ ಭಟ್ರ ಅಗಲಿಕೆಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಬಳ್ಳಮಜಲು ಡಾ. ರಾಜೇಂದ್ರ ಪ್ರಸಾದ್ ಉದ್ಘಾಟಿಸಿದರು. ಈಶ್ವರ ಭಟ್ ಪೆರ್ಮುಖ ಅಧ್ಯಕ್ಷತೆ ವಹಿಸಿದರು. ಶಂಕರ ಸಗ್ರಿತ್ತಾಯ ಮುಖ್ಯ ಅತಿಥಿಯಾಗಿ ಮಾತನಾಡಿ, ಸ್ವಂತ ಕೃತಿಯಾದ ‘ಶ್ರುತಿ ಪ್ರಸೂನಂ’ನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು. ದೇವಾಲಯದ ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರ್ ಶುಭ ಹಾರೈಸಿದರು. ಕೋಶಾಧಿಕಾರಿ ಗೋವಿಂದ ಭಟ್ ಏತಡ್ಕ, ಕಾರ್ಯ ದರ್ಶಿ ಶ್ಯಾಮಪ್ರಸಾದ್ ಕಬೆಕ್ಕೋಡು, ಸುಬ್ರಹ್ಮಣ್ಯ ಪ್ರಸಾದ, ಮುರಳೀಧರ ಶರ್ಮ ಉಪಸ್ಥಿತರಿದ್ದರು. ವೇದಮೂರ್ತಿ ವೆಂಕಟೇಶ ಭಟ್ ವಂದಿಸಿದರು.