ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನ ಜೀರ್ಣೋದ್ಧಾರ ಧರ್ಮಸ್ಥಳ ಕ್ಷೇತ್ರ ವತಿಯಿಂದ 10 ಲಕ್ಷ ರೂ. ದೇಣಿಗೆ ಹಸ್ತಾಂತರ
ಬದಿಯಡ್ಕ : ಕುಂಬಳೆ ಸೀಮೆಯ ಪ್ರಸಿದ್ಧ ಕ್ಷೇತ್ರವಾದ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ತ್ವರಿತ ಗತಿಯಲ್ಲಿ ಸಾಗುತ್ತಿದ್ದÄ ಶ್ರೀ ಕ್ಷೇತ್ರ ಧರ್ಮಸ್ಥಳ ದ ಧರ್ಮಧಿಕಾರಿ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆ ಕೊಡ ಮಾಡಿದ 10 ಲಕ್ಷ ರೂ. ದೇಣಿಗೆ ಮೊತ್ತವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಹಸ್ತಾಂತರಿಸಿದರು. ಅವರು ಮಾತನಾಡಿ ಶ್ರೀ ಉದನೇಶ್ವರ ದೇವಸ್ಥಾನ ಮತ್ತು ಧರ್ಮಸ್ಥಳ ಕ್ಷೇತ್ರ ನಡುವಿನ ಅವಿನಾಭಾವ ಸಂಬAಧವನ್ನು ಸ್ಮರಿಸಿದರು. ಈ ಹಿಂದೆ ನಡೆದ ಎರಡು ಮದ್ಯವರ್ಜನ ಶಿಬಿರ, ಧರ್ಮಸ್ಥಳ ಮೇಳದ ಯಕ್ಷಗಾನ ಬಯಲಾಟ, ಪೆರಡಾಲದ ಧರ್ಮಸ್ಥಳ ಸ್ವಸಹಾಯ ಸಂಘಗಳು, ಸೌಪರ್ಣಿಕಾ ಸಮಿತಿ ಕೆಲಸ ಕಾರ್ಯಗಳನ್ನು ಅಭಿನಂದಿಸಿದರು.
ಸೇವಾ ಸಮಿತಿ ಅಧ್ಯಕ್ಷ ಜಯ ದೇವ ಖಂಡಿಗೆ ಅಧ್ಯಕ್ಷತೆ ವಹಿಸಿದರು, ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವಸಹಾಯ ಸಂಘದ ಕಾಸರಗೋಡು ಯೋಜನಾಧಿಕಾರಿ ಮುಕೇಶ್, ಬದಿಯಡ್ಕ ವಲಯ ಮೇಲ್ವಿಚಾರಕ
ದಿನೇಶ್ ಕೊಕ್ಕಡ, ಬದಿಯಡ್ಕ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಅಖಿಲೇಶ್ ನಗುಮಗಂ, ಜೀರ್ಣೋ ದ್ಧಾರ ಸಮಿತಿ ಕೋಶಾಧಿಕಾರಿ ಶ್ರೀ ಸೂರ್ಯನಾರಾಯಣ ಬಿ, ಉಪಾಧ್ಯಕ್ಷ ಪಿಜಿ.ಚಂದ್ರಹಾಸ ರೈ , ಸಮಿತಿ ಲೆಕ್ಕ ಪರಿಶೋಧಕ ಕುಂಞಣ್ಣ ಬದಿಯಡ್ಕ, ಕಾರ್ಮಾರು ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಮಹೇಶ ವಳಕ್ಕುಂಜ, ಜೀರ್ಣೋದ್ಧಾರ ಯುವ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಪಂಜಿತ್ತಡ್ಕ, ಸೌಪರ್ಣಿಕಾ ನವ ಜೀವನ ಸಮಿತಿ ಅಧ್ಯಕ್ಷ ಜಯರಾಮ ಪಾಟಾಳಿ ಪಡುಮಲೆ ಮಾತೃ ಸಮಿತಿ ಉಪಾಧ್ಯಕ್ಷೆ ವಿನಯ ಜೆ ರೈ, ಕಾರ್ಯದರ್ಶಿ ಗೀತಾ ಎಂ. ಭಟ್, ಅರ್ಚಕ ವೃಂದ, ಸಿಬ್ಬಂದಿ ವರ್ಗ ಮತ್ತು ಶಿವ ಶಕ್ತಿ ಕ್ಲಬ್ಬಿನ ಪದಾಧಿ ಕಾರಿಗಳು ಸದಸ್ಯರು ಉಪಸ್ಥಿತರಿದ್ದರು. ಸೇವಾ ಸಮಿತಿ ಮತ್ತು ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಸ್ವಾಗತಿಸಿ ಪ್ರಸ್ತಾವಿ ಸಿದರು. ಮೊಕ್ತೇಸರ ಪಿ.ಜಿ ಜಗನ್ನಾಥ ರೈ ವಂದಿಸಿದರು. ವೇದಮೂರ್ತಿ ವೆಂಕಟೇಶ್ವರ ಭಟ್ ಪಟ್ಟಾಜೆ ಪ್ರಾರ್ಥನೆ ಹಾಡಿದರು.