ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನ ವಾರ್ಷಿಕ ಧನುಸಂಕ್ರಮಣ ಮಹೋತ್ಸವ
ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಧನುಸಂಕ್ರಮಣ ಶ್ರೀ ಭೂತಬಲಿ ಉತ್ಸವ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮಾಪ್ತಿಗೊಂಡಿತು. ಭಾನುವಾರ ಬೆಳಗ್ಗೆ ಗಣಪತಿ ಹೋಮ, ವಿವಿಧ ಭಜನಾ ತಂಡಗಳಿAದ ಭಜನೆ, ಏಕಾದಶ ರುದ್ರಾಭಿಷೇಕ, ನವಕಾಭಿಷೇಕ, ತುಲಾಭಾರ ಸೇವೆ, ಮಹಾಪೂಜೆ, ಶ್ರೀ ಶಿವಲಿ ಉತ್ಸವ, ಅನ್ನಸಂತರ್ಪಣೆ ನಡೆಯಿತು. ಸಂಜೆ ದೀಪಾರಾಧನೆ, ಚೆಂಡೆಮೇಳ, ಶ್ರೀ ರಂಗಪೂಜೆ, ರಾತ್ರಿ ಶ್ರೀ ದೇವರ ಉತ್ಸವ ಬಲಿ, ಬೆಡಿಸೇವೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಯಕ್ಷವಿಹಾರಿ ಬಳಗ ಬದಿಯಡ್ಕ ಇವರಿಂದ ಯಕ್ಷಗಾನ ತಾಳಮದ್ದಳೆ, ಕೃಷ್ಣಸಂಧಾನ, ಹಾಗೂ ಅಪರಾಹ್ನ ಮಾನ್ಯ ವಿಶ್ವನಾಥ ರೈ ಬಳಗದವರಿಂದ ಶರಸೇತು ಬಂಧನ, ಸಂಜೆ ಶ್ರೀ ಉದನೇಶ್ವರ ಕುಣಿತ ಭಜನಾ ಸಂಘದವರಿAದ ಕುಣಿತ ಭಜನೆ, ಸಂಗೀತವಿದುಷಿ ಗೀತಾ ಸಾರಡ್ಕ ಇವರ ವಿದ್ಯಾರ್ಥಿಗಳಿಂದ ಶಾಸ್ತಿçÃಯ ಸಂಗೀತ, ರಾತ್ರಿ ಶಿವಶಕ್ತಿ ಪೆರಡಾಲ ಪ್ರಾಯೋಜಕತ್ವದಲ್ಲಿ ರಸಮಂಜರಿ ನಡೆಯಿತು. ನಿನ್ನೆ ಬೆಳಗ್ಗೆ ಶ್ರೀದೇವರ ಬಲಿ ಉತ್ಸವ, ಬಟ್ಟಲುಕಾಣಿಕೆ ನಡೆಯಿತು.