ಪೆರುಮಾಳ್ ಲಾಟರಿಯಲ್ಲಿ 1 ಕೋಟಿ ರೂ. ಬಹುಮಾನ
ಕಾಸರಗೋಡು: ಪೆರುಮಾಳ್ ಲಾಟರೀಸ್ನಲ್ಲಿ ಮಾರಾಟ ಮಾಡಿದ ಟಿಕೆಟ್ಗೆ ಓಣಂ ಬಂಪರ್ನ ದ್ವಿತೀಯ ಬಹುಮಾನವಾದ 1 ಕೋಟಿ ರೂ. ಲಭಿಸಿದೆ. ಮಲಪ್ಪುರಂ ಜಿಲ್ಲಾ ಟಿಕೆಟ್ ಆದ ಟಿಜೆ 201260 ಎಂಬ ಟಿಕೆಟ್ಗೆ ಬಹುಮಾನ ಲಭಿಸಿದ್ದು, ಇಲ್ಲಿಂದ ಮಾರಾಟ ಮಾಡಿದ ಲಾಟರಿ ಟಿಕೆಟ್ಗಳಿಗೆ ಈ ಮೊದಲು ಹಲವು ಬಹುಮಾನಗಳು ಲಭಿಸಿವೆ. ಮೂರು ಬಾರಿ 1 ಕೋಟಿಯ ಬಹುಮಾನ, ಎರಡು ಬಾರಿ 70 ಲಕ್ಷದ ಪ್ರಥಮ ಬಹುಮಾನ, 1 ಬಾರಿ 65 ಲಕ್ಷ ರೂ. ಪ್ರಥಮ ಬಹುಮಾನ ಲಭಿಸಿದೆ ಎಂದು ಕಾಸರಗೋಡು ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಶ್ರೀ ಪೆರುಮಾಳ್ ಲಾಟರಿ ಏಜೆಂಟ್ ತಿಳಿಸಿದ್ದಾರೆ.