ಪೆರ್ಣೆ ಕಳ ಶ್ರೀ ದೈವದ ಗದ್ದೆಯಲ್ಲಿ ಪಡ್ಡಯಿ ಧೂಮಾವತಿ ದೈವಕೋಲ
ಕುಂಬಳೆ: ಪೆರ್ಣೆ ಶ್ರೀ ಪಡ್ಡಯಿ ಧೂಮಾವತಿ ಹಾಗೂ ಪರಿವಾರ ದೈವಗಳ ನೇಮೋತ್ಸವ ಫೆ. 11,12 ರಂದು ಜರಗಲಿದೆ. 11ರಂದು ಸಂಜೆ 6.45ಕ್ಕೆ ಅನಂತಪುರ ತರವಾಡು ದೊಡ್ಡ ಮನೆಯಿಂದ ಶ್ರೀ ದೈವಗಳ ಭಂಡಾರ ವಾದ್ಯ ಘೋಷಗ ಳೊಂದಿಗೆ ಪೆರ್ಣೆ ಕಳ ಶ್ರೀ ದೈವದ ಗದ್ದೆಗೆ ಹೊರಡುವುದು. ರಾತ್ರಿ 8 ಗಂಟೆಗೆ ತೊಡಂಙಲ್, ಮೋಂದಿ ಕೋಲ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ.
12ರಂದು ಬೆಳಗ್ಗೆ 8 ಗಂಟೆಗೆ ಶ್ರೀ ಬಬ್ಬರ್ಯ ದೈವದ ಕೋಲ, 10ಕ್ಕೆ ಶ್ರೀ ಸ್ಥಳ ಧೂಮಾವತಿ ದೈವದ ಕೋಲ ಮತ್ತು ಮಧ್ಯಾಹ್ನ 12ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ. 1.30ಕ್ಕೆ ಶ್ರೀ ಪಡ್ಡಯಿ ಧೂಮಾವತಿ ದೈವದ ಕೋಲ ನಡೆಯಲಿದೆ. ಅಪರಾಹ್ನ 4 ಗಂಟೆಗೆ ಶ್ರೀ ಗುಳಿಗ ದೈವದ ಕೋಲ ಮತ್ತು ಭಂಡಾರ ನಿರ್ಗಮನ.