ಪೆರ್ಲ ದೇವಲೋಕದಲ್ಲಿ ಕಾಲೇಜಿನಿಂದ ಕಳವಿಗೆತ್ನ: ಇಬ್ಬರು ಕೈಯಾರೆ ಸೆರೆ
ಪೆರ್ಲ: ಇಲ್ಲಿಗೆ ಸಮೀಪದ ದೇವಲೋಕ ಎಂಬಲ್ಲಿನ ಕಾಲೇಜಿನಿಂದ ಕಳವುಗೈಯ್ಯಲು ಯತ್ನಿಸಿದ ಇಬ್ಬರನ್ನು ಕಾವಲುಗಾರ ಕೈಯ್ಯಾರೆ ಸೆರೆಹಿಡಿದ ಘಟನೆ ನಿನ್ನೆ ರಾತ್ರಿ ನಡೆದಿದೆ.
ದೇವಲೋಕದ ಸೈಂಟ್ ಗ್ರಿಗೋರಿಯಸ್ ಕಾಲೇಜಿನಲ್ಲಿ ಕಳವು ಯತ್ನ ನಡೆದಿದೆ. ಈ ಸಂಬಂಧ ಶೇಣಿ ಬಲ್ತಕಲ್ಲು ನಿವಾಸಿ ಸುಧೀರ್ (29), ಕಾಟುಕುಕ್ಕೆಯ ರವಿಪ್ರಸಾದ್ (25) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ನಿನ್ನೆ ರಾತ್ರಿ ಕಾಲೇಜಿಗೆ ತಲುಪಿದ ಈ ಇಬ್ಬರು ಗೋಡೆಯಿಂದ ಕಿಟಿಕಿ ಕಳಚಿ ತೆಗೆದು ಕಬ್ಬಿಣವನ್ನು ಬೇರ್ಪಡಿಸುತ್ತಿದ್ದಾಗ ಶಬ್ದ ಕೇಳಿದ ಕಾವಲುಗಾರ ಅಲ್ಲಿಗೆ ತಲುಪಿದ್ದಾನೆ. ಕೂಡಲೇ ಅವರಿಬ್ಬರನ್ನು ಸೆರೆಹಿಡಿದು ಸ್ಥಳೀಯರಿಗೆ ವಿಷಯ ತಿಳಿಸಲಾಯಿತು.
ಬಳಿಕ ವಿಷಯ ತಿಳಿದು ಸ್ಥಳಕ್ಕೆ ತಲುಪಿದ ಪೊಲೀಸರು ಕಳ್ಳರನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಅಲ್ಪಕಾಲದಿಂದ ಈ ಕಾಲೇಜು ಮುಚ್ಚುಗಡೆಗೊಂಡಿದೆ.