ಹಾವು ಕಡಿದು ಚಿಕಿತ್ಸೆಯಲ್ಲಿದ್ದ ಗೃಹಿಣಿ ಮೃತ್ಯು
ಪೆರ್ಲ: ಮನೆಯ ಬಚ್ಚಲು ಕೊಠಡಿಯಲ್ಲಿ ಹಾವು ಕಡಿದು ಚಿಕಿತ್ಸೆಯಲ್ಲಿದ್ದ ಗೃಹಿಣಿ ಮೃತಪಟ್ಟರು.
ಬಾಳೆಮೂಲೆ ಚಾಕಟೆ ಎಂಬಲ್ಲಿನ ದಿ| ಲಕ್ಷ್ಮಿ ಎಂಬವರ ಪುತ್ರಿ ಅಮ್ಮಕ್ಕು (65) ಮೃತ ಮಹಿಳೆ. ಮೂರು ವಾರಗಳ ಹಿಂದೆ ಇವರಿಗೆ ಹಾವು ಕಡಿದಿದೆ. ಮನೆಯ ಹೊರಗಿನ ಬಚ್ಚಲು ಕೊಠಡಿಗೆ ತೆರಳಿದ್ದ ವೇಳೆ ಇವರಿಗೆ ಹಾವು ಕಡಿದಿತ್ತು. ಅಮ್ಮಕ್ಕುವಿನ ಬೊಬ್ಬೆ ಕೇಳಿ ಮನೆಯ ವರು ತಲುಪಿ ನೋಡಿದಾಗ ಹಾವೊಂ ದು ಹೋಗುತ್ತಿರುವುದು ಕಂಡುಬಂ ದಿದೆ. ಹಾವಿನ ಕಡಿತದಿಂದ ತೀವ್ರ ಅಸ್ವಸ್ಥಗೊಂಡ ಅಮ್ಮಕ್ಕುರನ್ನು ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿತ್ತು.ಸ್ಥಿತಿ ಗಂಭೀರವಾದುದರಿಂದ ಬಳಿಕ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲು ಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.