ಪೆರ್ವೋಡಿಯಲ್ಲಿ ರಸ್ತೆ ಕುಸಿದು ವರ್ಷ ಕಳೆದರೂ ದುರಸ್ತಿ ಇಲ್ಲ : ವಾಹನ ಸಂಚಾರ ಭೀತಿಯಲ್ಲಿ; ಊರವರಿಂದ ಪ್ರತಿಭಟನೆ ಎಚ್ಚರಿಕೆ
ಪೈವಳಿಕೆ: ಲೊಕೋಪಯೋಗಿ ಇಲಾಖೆಯ ಮುಳಿಗದ್ದೆ-ಬಳ್ಳೂರು ರಸ್ತೆಯ ಪೆರ್ವೋಡಿ ಎಂಬಲ್ಲಿ ರಸ್ತೆ ಕುಸಿದು ಬಿದ್ದು ಒಂದು ವರ್ಷ ಕಳೆಯುತ್ತಾ ಬಂದರೂ ದುರಸ್ತಿಗೆ ಕ್ರಮಕೈಗೊಳ್ಳದೆ ಅಧಿಕಾರಿಗಳು ನಿರ್ಲಕ್ಷö್ಯ ವಹಿಸುತ್ತಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ. ಕಳೆದ ವರ್ಷ ಜುಲೈಯಲ್ಲಿ ರಸ್ತೆ ಕುಸಿದು ಬಿದ್ದಿದೆ. ರಸ್ತೆ ಬಳಿಯಲ್ಲೇ ವ್ಯಕ್ತಿಯೋರ್ವರ ತೋಟದಲ್ಲಿ ಕೆರೆ ಇರುವುದರಿಂದ ವಾಹನ ಸಂಚಾರಕ್ಕೆ ಭೀತಿ ಸೃಷ್ಟಿಯಾಗಿದೆ. ಕುಸಿದು ಬಿದ್ದ ಸ್ಥಳಕ್ಕೆ ಅಧಿಕಾರಿಗಳು ತಲುಪಿ ಮಾಹಿತಿ ಸಂಗ್ರಹಿಸಿದ್ದರು. ಆದರೆ ದುರಸ್ತಿಗೊಳಿಸದ ಕಾರಣ ಆತಂಕದಲ್ಲೇ ಬಸ್ ಸಹಿತ ವಾಹನಗಳು ಸಂಚರಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ದುರಸ್ತಿಗೊಳಿಸಲು ಪಂಚಾಯತ್ ಸದಸ್ಯೆ ಜಯಲಕ್ಷಿö್ಮ ಭಟ್ ಸಹಿತ ಊರವರು ನಿರಂತರ ಒತ್ತಾಯಿಸುತ್ತಿದ್ದಾರೆ. ಈ ಮಧ್ಯೆ ಲೊಕೋಪಯೋಗಿ ಇಲಾಖೆ ನೌಕರರು ತಲುಪಿ ಕುಸಿದ ರಸ್ತೆ ಪರಿಸರದಲ್ಲಿ ಹಗ್ಗವನ್ನು ಕಟ್ಟಿ, ಅಪಘಾತ ವಲಯ ಎಂದು ಬೋರ್ಡ್ನ್ನು ಹಾಕಿಹೋಗಿದ್ದಾರೆ. ಈಗ ಮಳೆಗೆ ಮತ್ತೆ ಕುಸಿಯಲು ಆರಂಭಿಸಿದ್ದು, ಭಾರೀ ಭೀತಿ ಸೃಷ್ಟಿ ಯಾಗಿದೆ. ರಸ್ತೆಯನ್ನು ದುರಸ್ತಿಗೊಳಿಸ ದಿರುವುದು ಊರವರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಕುಸಿದು ಬಿದ್ದ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸದಿದ್ದರೆ ಊರವರನ್ನು ಒಟ್ಟು ಸೇರಿಸಿ ಪ್ರತಿಭಟನೆಗೆ ಮುಂದಾಗಬೇಕಾದಿತು ಎಂದು ಪಂಚಾಯತ್ ಸದಸ್ಯೆ ಜಯಲಕ್ಷಿö್ಮ ಭಟ್ ತಿಳಿಸಿದ್ದಾರೆ.