ಪೇಟೆಗೆಂದು ತಿಳಿಸಿ ಹೋದ ವ್ಯಕ್ತಿ ನಾಪತ್ತೆ
ಉಪ್ಪಳ: ಪೇಟೆಗೆ ಹೋಗುವು ದಾಗಿ ತಿಳಿಸಿ ಮನೆಯಿಂದ ತೆರಳಿದ ವ್ಯಕ್ತಿ ನಾಪತ್ತೆಯಾದ ಬಗ್ಗೆ ದೂರಲಾ ಗಿದೆ. ಬಾಯಾರು ಗಾಳಿಯಡ್ಕ ಆವಳಕಲ್ಲಡ್ಕದ ಮೋಹನ (66) ನಾಪತ್ತೆಯಾದ ವ್ಯಕ್ತಿ. ಡಿಸೆಂಬರ್ 16ರಂದು ಬೆಳಿಗ್ಗೆ 10 ಗಂಟೆಗೆ ಬಾಯಾರು ಪೇಟೆಗೆಂದು ತಿಳಿಸಿ ಮೋಹನ ಮನೆಯಿಂದ ತೆರಳಿದ್ದಾರೆನ್ನಲಾಗಿದೆ. ಅನಂತರ ಮನೆಗೆ ಮರಳಿ ಬಂದಿಲ್ಲವೆಂದು ಪುತ್ರ ಅಜಿತ್ ಕುಮಾರ್ ಮಂಜೇಶ್ವರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.