ಪೈಕ ಪೂಮಾಣಿ ಕಿನ್ನಿಮಾಣಿ ಕ್ಷೇತ್ರ ಉತ್ಸವ 24ರಿಂದ
ಪುಂಡೂರು: ಪೈಕ ಪೂಮಾಣಿ ಕಿನ್ನಿಮಾಣಿ ಕ್ಷೇತ್ರದ ಉತ್ಸವ ಈ ತಿಂಗಳ 24ರಿಂದ 28ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
24ರಂದು ರಾತ್ರಿ ಪುಂಡೂರು ನಡು ಇಲ್ಲಂನಿಂದ ಭಂಡಾರ ಆಗಮನ, 25ರಂದು ವಿವಿಧ ಕಡೆಗಳಿಂದ ಹೊರೆಕಾಣಿಗೆ ಮೆರವಣಿಗೆ ಆಗಮನ, ರಾತ್ರಿ ಮಹಾರಥೋತ್ಸವ, 26ರಂದು ತುಲಾಭಾರ, ಮಧ್ಯಾಹ್ನಶ್ರೀ ಕಿನ್ನಿಮಾಣಿ ಪೂಮಾಣಿ ದೈವದ ನರ್ತನ, ರಾತ್ರಿ 8ಕ್ಕೆ ಕೈಕೊಟ್ಟಿಕಳಿ, ತಿರುವಾದಿರ, ೨೭ರಂದು ಮಧ್ಯಾಹ್ನ ಶ್ರೀ ಪೂಮಾಣಿ ದೈವದ ನೇಮ, ರಾತ್ರಿ ೮ಕ್ಕೆ ಗಾನಮೇಳ, 9.30ಕ್ಕೆ ಭಂಡಾರ ಮೆರವಣಿಗೆ, 10ಕ್ಕೆ ಸುಡುಮದ್ದು ಪ್ರದರ್ಶನ, ೨೮ರಂದು ಮಧ್ಯಾಹ್ನ 12ರಿಂದ ಬೀರ್ಣಾಳ್ವ ದೈವ, 5 ಗಂಟೆಗೆ ಶ್ರೀ ಧೂಮಾವತಿ ಪಿಲಿಚಾಮುಂಡಿ ದೈವದ ನೇಮ, ಆರಾಟು ಉತ್ಸವ ನಡೆಯಲಿದೆ. ಈ ದಿನಗಳಲ್ಲಿ ಭಜನೆ, ಅನ್ನಸಂತರ್ಪಣೆ ನಡೆಯಲಿದೆ.