ಪೈವಳಿಕೆ ಚಿತ್ತಾರಿ ಚಾವಡಿ ಧರ್ಮನೇಮ ಸಮಾಪ್ತಿ

ಪೈವಳಿಕೆ: ಪೈವಳಿಕೆ ಅರಮನೆ ಚಿತ್ತಾರಿ ಶ್ರೀ ಉಳ್ಳಾಲ್ತಿ ದೇವಿ ಚಾವಡಿ ವಾರ್ಷಿಕ ಧರ್ಮ ನೇಮ ಮತ್ತು ಪೈವಳಿಕೆ ಅರಮನೆ ರಂಗತ್ರೈ ಅರಸರ 75ನೇ ಜನ್ಮವಾರ್ಷಿಕ ಆಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ಸಮಾಪ್ತಿಗೊಂ ಡಿತು. ಕಾರ್ಯಕ್ರಮದಂಗವಾಗಿ ನೇಮ, ನವಕಕಲಶ, ಮಹಾ ಗಣಪತಿ ಹವನ, ನವಗ್ರಹ ಶಾಂತಿ ಹವನ, ಮೃತ್ಯುಂಜಯ ಹವನ, ದೇವಿಗೆ ತಂಬಿಲ, ಅನ್ನ ಸಂತರ್ಪಣೆ ಜರಗಿತು. ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕ ಎಕೆಎಂ ಅಶ್ರಫ್, ಎಸ್.ಐ. ಮೊಹ ಮ್ಮದ್ ಇಸ್ಮಾಯಿಲ್, ನ್ಯಾಯವಾದಿ ಮೋನಪ್ಪ ಭಂಡಾರಿ, ನ್ಯಾಯವಾದಿ  ಶ್ರೀಹರಿರಾವ್, ಕೆ.ಆರ್. ಜಯಾನಂದ, ಡಾ| ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಗಂಗಾಧರ ಬಲ್ಲಾಳ್, ಹರೀಶ್ ಭಂಡಾರಿ, ಡಾ| ರಾಜರಾಂ ದೇವಕಾನ, ಶ್ರೀಧರ ಮುಟ್ಟಂ, ಗೋಪಾಲಕೃಷ್ಣ ವಾಂತಿಚ್ಚಾಲು, ಅಶೋಕ್ ಎಂ.ಸಿ, ಕೆ. ಅಬ್ದುಲ್ಲ, ಪವಿತ್ರ ಬಲ್ಲಾಳ್ ಸಹಿತ ಹಲವರು ಭಾಗವಹಿ ಸಿದರು. ಇದೇ ವೇಳೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ರಂಗತ್ರೈ ಅರಸ ದಂಪತಿಯನ್ನು ಗೌರವಿಸಲಾಯಿತು. ಅಶ್ವತ್ ಪೂಜಾರಿ ಲಾಲ್‌ಬಾಗ್, ಸನತ್ ರೈ ಕಳ್ಳಿಗೆ, ದೇವಿಪ್ರಸಾದ್ ಶೆಟ್ಟಿ ಬೆಜ್ಜ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯ ಕ್ರಮದಂಗವಾಗಿ ಕಾರಡ್ಕ ಫೌಂಡೇಶನ್ ಸ್ಥಾಪಕ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಕಲಾ ರತ್ನ ರಾಘವ ಬಲ್ಲಾಳ್‌ರ ಶಿಷ್ಯರಿಂದ ಹಾಗೂ ಅತಿಥಿ ಕಲಾವಿದರಿಂದ ‘ನರಕಾಸುರ ಮೋಕ್ಷ ಗರುಡ ಗರ್ವಭಂಗ’ ಯಕ್ಷಗಾನ ಪ್ರದರ್ಶನಗೊಂಡಿತು. ಮಕ್ಕಳಿಂದ ಯಕ್ಷಗಾನ ಪೂರ್ವ ರಂಗಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಯಕ್ಷಗುರು ರಾಘವ ಬಲ್ಲಾಳ್‌ರನ್ನು ಪೈವಳಿಕೆ  ಅರಮನೆ ರಂಗತ್ರೈ ಅರಸರು ಗೌರವಿಸಿದರು. ಬಳಿಕ ಬಾಯಿಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ಕುಣಿತ ಭಜನೆ ತಂಡದಿಂದ ಕುಣಿತ ಭಜನೆ, ನೃತ್ಯ ವೈಭವ ಜರಗಿತು.

Leave a Reply

Your email address will not be published. Required fields are marked *

You cannot copy content of this page