ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತೀ ಕ್ಷೇತ್ರ ಧ್ವಜಸ್ತಂಭ ಮುಹೂರ್ತ 24ರಂದು
ಕುಂಬ್ಡಾಜೆ: ಪೊಡಿಪ್ಪಳ ಶ್ರೀ ಚೀರುಂಬಾ ಭಗವತೀ ಕ್ಷೇತ್ರದ ನವೀಕರಣ ಚಟುವಟಿಕೆಗಳು ಭರದಿಂದ ಸಾಗುತ್ತಿದ್ದು, ಇದರ ಅಂಗವಾಗಿ ಕ್ಷೇತ್ರದಲ್ಲಿ ಸ್ಥಾಪಿಸಲಿರುವ ಧ್ವಜಸ್ತಂಭದ ಮುಹೂರ್ತ ಈ ತಿಂಗಳ ೨೪ರಂದು ಬೆಳಿಗ್ಗೆ 8.12 ರಿಂದ ಒಡೆಯಂಚಾಲ್ ಚುಳ್ಳಿಕ್ಕೆರೆ ನಡೆಯಲಿದೆ. ಅಂದು ಸಂಜೆ ನಾರಾಂಪಾಡಿಯಲ್ಲಿ ಸ್ವಾಗತ ನೀಡಿ ನಂತರ ಎ.ಪಿ. ಸರ್ಕಲ್ ಮೂಲಕ ಕರುವಲ್ತಡ್ಕದಿಂದ ಶ್ರೀ ಕ್ಷೇತ್ರಕ್ಕೆ ಧ್ವಜ ಸ್ತಂಭ ಮೆರವಣಿಗೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕ್ಷೇತ್ರದ ಅಚಾರ ಸ್ಥಾನಿಕರು, ಆಡಳಿತ ಸಮಿತಿ, ನವೀಕರಣ ಸಮಿತಿ ಪದಾಧಿಕಾರಿಗಳು ವಿನಂತಿಸಿದ್ದಾರೆ.