ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತೀ ಕ್ಷೇತ್ರದ ಸುತ್ತುಗೋಪುರಕ್ಕೆ ಶಿಲಾನ್ಯಾಸ
ಬೆಳಿಂಜ: ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತೀ ಕ್ಷೇತ್ರದ ನವೀಕರಣದಂಗವಾಗಿ ಸುತ್ತುಗೋಪುರಕ್ಕೆ ಶಿಲಾನ್ಯಾಸ ನಡೆಸಲಾಯಿತು. ಶಿಲ್ಪಿ ಸುಕುಮಾರನ್ ಚಾಲಿಂಗಾಲ್ ಶಿಲಾನ್ಯಾಸಕ್ಕೆ ನೇತೃತ್ವ ನೀಡಿದರು. ನೇರಪ್ಪಾಡಿ ತಂತ್ರಿ ಮನೆತನದ ಅಶೋಕ ಅಲೆವೂರಾಯ, ಆಡಳಿತ ಮೊಕ್ತೇಸರ ರಾಖಲ್ ಅಡ್ಯಂತಾಯ, ಅಂಬಾಡಿ ಕಾರ್ನವರ್, ಆಚಾರ ಸ್ಥಾನಿಕರು, ಆಡಳಿತ ಸಮಿತಿ ಅಧ್ಯಕ್ಷ ವಸಂತನ್ ಚೇಂಬೋಡು, ನವೀಕರಣ ಸಮಿತಿ ಅಧ್ಯಕ್ಷ ರಾಘವನ್ ಕನಕತ್ತೋಡಿ, ವಿವಿಧ ಸಮಿತಿ ಪದಾಧಿಕಾರಿಗಳು, ತೀಯ ಮಹಾಸಭಾ ಅಧ್ಯಕ್ಷ ಗಣೇಶ ಅರಮಂಗಾನಂ ಸಹಿತ ಭಕ್ತರು ಉಪಸ್ಥಿತರಿದ್ದರು.