ಪೊದೆಯಲ್ಲಿ ಬಚ್ಚಿಟ್ಟ 95 ಲೀಟರ್ ಹುಳಿರಸ ಪತ್ತೆ
ಕಾಸರಗೋಡು: ವೆಳ್ಳರಿಕುಂಡು ಚಾಲಿಂಡೆಕರದ ಪೊದೆಯಲ್ಲಿ ಐದು ಪಾತ್ರೆಗಳಲ್ಲಾಗಿ ತುಂಬಿಸಿಟ್ಟ ೯೫ ಲೀಟರ್ ಹುಳಿರಸ (ವಾಶ್)ನ್ನು ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಇನ್‌ಸ್ಪೆಕ್ಟರ್-ಗ್ರೇಡ್ ಕೆ.ವಿ. ಮುರಳಿ ನೇತೃತ್ವದ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಿ ವಶಪಡಿಸಿ ಕೊಂಡಿದೆ. ಈ ಬಗ್ಗೆ ನೀಲೇಶ್ವರ ರೇಂಜ್ ಅಬಕಾರಿ ಕಚೇರಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ. ಈ ಕಾರ್ಯಾ ಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಸಿ.ಕೆ.ವಿ. ಸುರೇಶ್, ಪ್ರಿವೆಂಟೀವ್ ಆಫೀಸರ್ (ಗ್ರೇಡ್) ನೌಶಾದ್, ಸಿಇಒಗಳಾದ ಸತೀಶನ್.ಕೆ, ಅತುಲ್ ಟಿ.ವಿ. ಮತ್ತು ಅಶ್ವಿನಿ ವಿ.ವಿ. ಎಂಬವರು ಒಳಗೊಂಡಿದ್ದರು.