ಪೊಲೀಸರಿಂದ ಹಲ್ಲೆ ಆರೋಪ : ಯುವ ವ್ಯಾಪಾರಿ ಆಸ್ಪತ್ರೆಯಲ್ಲಿ ದಾಖಲು
ಕುಂಬಳೆ: ಕುಂಬಳೆ ಪೇಟೆಯ ವ್ಯಾಪಾರಿಯೊಬ್ಬರಿಗೆ ಪೊಲೀಸರು ಹಲ್ಲೆಗೈದು ಗಾಯಗೊಳಿಸಿರುವುದಾಗಿ ದೂರಲಾಗಿದೆ.
ಪೇಟೆಯಲ್ಲಿ ಚಪ್ಪಲಿ ವ್ಯಾಪಾರಿ ಯಾಗಿರುವ ಪೇರಾಲ್ ಮಡಿ ಮೊಗರಿನ ಮೊಹಮ್ಮದ್ ಶಾಹಿದ್ (೨೨) ಹಲ್ಲೆಯಿಂದ ಗಾಯಗೊಂಡು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಿನ್ನೆ ರಾತ್ರಿ ೧೧ ಗಂಟೆ ವೇಳೆ ಅಂಗಡಿಗೆ ನುಗ್ಗಿದ ಪೊಲೀಸ್ ಹಲ್ಲೆಗೈದಿರುವು ದಾಗಿ ಗಾಯಾಳು ದೂರಿದ್ದಾರೆ.
ಇದೇ ವೇಳೆ ಪೊಲೀಸರು ವ್ಯಾಪಾರಿ ಮೇಲೆ ನಡೆಸಿದ ಹಲ್ಲೆಯನ್ನು ಪ್ರತಿಭಟಿಸಿ ಕುಂಬಳೆಯ ವ್ಯಾಪಾರಿಗಳು ಇಂದು ಸಭೆ ನಡೆಸಲು ನಿರ್ಧರಿಸಿದ್ದಾರೆ. ಇದೇ ವೇಳೆ ಘಟನೆ ಕುರಿತು ದೂರು ಲಭಿಸಿದೆಯೆಂದೂ ಆ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಸಿಐ ತಿಳಿಸಿದ್ದಾರೆ.