ಪೊಲೀಸರು ನಾಶಗೊಳಿಸಿದ ಅನಧಿಕೃತ ಕಡವು ಮತ್ತೆ ನಿರ್ಮಾಣ: ಹೊಯ್ಗೆ ಸಾಗಾಟ ವ್ಯಾಪಕ- ದೂರು
ಕುಂಬಳೆ: ಎರಡು ದಿನಗಳ ಹಿಂದೆ ಯಷ್ಟೇ ಪೊಲೀಸರು ಕೆಡವಿದ ಅನಧಿಕೃತ ಕಡವು ಇದೀಗ ಮತ್ತೆ ನಿರ್ಮಾಣವಾದ ಬಗ್ಗೆ ದೂರುಂಟಾಗಿದೆ. ಕಡವುಗಳನ್ನು ಕೆಡವಿ ಪೊಲೀಸರು ಮರಳಿದ ಬೆನ್ನಲ್ಲೇ ಅಲ್ಲಿಗೆ ತಲುಪಿದ ಹೊಯ್ಗೆ ಮಾಫಿಯಾಗಳು ಕಡವು ಪುನರ್ ನಿರ್ಮಿಸಿದ್ದು ಅನಂತರ ರಾತ್ರಿ ಹೊತ್ತಿನಲ್ಲಿ ಹೊಯ್ಗೆ ಅನಧಿಕೃತ ವಾಗಿ ಸಾಗಾಟ ಮತ್ತೆ ತೀವ್ರಗೊಂ ಡಿದೆ. ಶಿರಿಯ ವಳಯಂನಲ್ಲಿದ್ದ ಆರು ಅನಧಿಕೃತ ಕಡವುಗಳನ್ನು ಎರಡು ದಿನಗಳ ಹಿಂದೆ ಕುಂಬಳೆ ಎಸ್.ಐ. ವಿ.ಕೆ. ಅನೀಶ್ರ ನೇತೃತ್ವದಲ್ಲಿ ಪೊಲೀಸರು ಜೆಸಿಬಿ ಬಳಸಿ ನಾಶಗೊಳಿಸಿದ್ದರು. ಪೊಲೀಸರು ಮರಳಿದ ಬೆನ್ನಲ್ಲೇ ಮತ್ತೆ ಅದೇ ಸ್ಥಳ ದಲ್ಲಿ ಕಡವು ನಿರ್ಮಾಣವಾಗಿದೆ ಮಾತ್ರವಲ್ಲ ಅಲ್ಲಿಂದ ಅನಧಿಕೃತ ಹೊಯ್ಗೆ ಸಾಗಾಟ ಮತ್ತೆ ತೀವ್ರ ಗೊಂಡಿದೆಯೆಂದು ದೂರಲಾಗಿದೆ. ಅನಧಿಕೃತ ಕಡವುಗಳ ವಿರುದ್ಧ ಕಠಿಣ ಕ್ರಮ ಮುಂದುವರಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.