ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಂ. ಸದಸ್ಯನ ವಿರುದ್ಧ ಕೇಸು
ಉಪ್ಪಳ: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಂತೆ ಮಂಗಲ್ಪಾಡಿ ಪಂಚಾಯತ್ ಸದಸ್ಯ ಉಪ್ಪಳ ಮುಸೋಡಿಯ ಮೊಹ ಮ್ಮದ್ ಹುಸೈನ್ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ.
ನಿನ್ನೆ ಸಂಜೆ ಮೊಹಮ್ಮದ್ ಹುಸೈನ್ ಬುಲ್ಲೆಟ್ ಬೈಕ್ನಲ್ಲಿ ಸಂಚರಿಸುತ್ತಿದ್ದಾಗ ಉಪ್ಪಳ ಪೇಟೆಯ ಸರ್ವೀಸ್ ರಸ್ತೆಯಲ್ಲಿ ಟ್ರಾಫಿಕ್ ನಿಯಂತ್ರಣ ನಡೆಸುತ್ತಿದ್ದ ಪೊಲೀಸರು ಬೈಕ್ನ ಫೋಟೋ ತೆಗೆದಿದ್ದಾರೆನ್ನ ಲಾಗಿದೆ. ಇದರಿಂದ ಬೈಕ್ನ್ನು ರಸ್ತೆಯಲ್ಲೇ ನಿಲ್ಲಿಸಿದ ಮೊಹಮ್ಮದ್ ಹುಸೈನ್ ಪೊಲೀಸರೊಂದಿಗೆ ವಾಗ್ವಾ ದ ನಡೆಸಿ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿದರೆಂದು ಆರೋಪಿಸಲಾಗಿದೆ. ಈ ಬಗ್ಗೆ ಟ್ರಾಫಿಕ್ ಪೊಲೀಸರು ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.