ಪೊವ್ವಲ್‌ನಲ್ಲಿ ಮನೆಯಿಂದ ಕಳವಿಗೆತ್ನ
ಬೋವಿಕ್ಕಾನ: ಪೊವ್ವಲ್ ಬೆಂಚ್ ಕೋರ್ಟ್ ಸಮೀಪ ಎರಡಂ ತಸ್ತಿನ ಮನೆಯಿಂದ ಕಳವು ಯತ್ನ ನಡೆದಿರುವುದಾಗಿ ವರದಿಯಾಗಿದೆ. ಕುಟುಂಬ ವಿದೇಶದಲ್ಲಿದ್ದು, ಇದರಿಂದ ಮನೆಗೆ ಬೀಗ ಜಡಿಯಲಾಗಿತ್ತು. ಕುಟುಂಬ ಸದಸ್ಯನಾದ ತೌಫೀಕ್ ರಹ್ಮಾನ್ ಎಂಬವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಅವರು ಎರಡು ದಿನಗಳ ಹಿಂದೆ ಮನೆಗೆ ಬಂದಿದ್ದರು. ಮನೆಯಲ್ಲಿ ಬೇರೆ ಯಾರೂ ಇಲ್ಲದಿದ್ದುದರಿಂದ ಅವರು ಬೇವಿಂಜೆಯಲ್ಲಿರುವ ಸಹೋದರಿಯ ಮನೆಯಲ್ಲಿ ವಾಸಿಸುತ್ತಿದ್ದರು. ಮಂಗಳವಾರ ಸಂಜೆ ಸಹೋದರಿಯ ಮನೆಗೆ ಹೋದ ಅವರು ನಿನ್ನೆ ಬೆಳಿಗ್ಗೆ ಮರಳಿ ಬಂದಾಗ ಮುಂಭಾಗದ ಬಾಗಿಲು ಮುರಿದ ಸ್ಥಿತಿಯಲ್ಲಿ ಪತ್ತೆ ಯಾಗಿರುವುದಾಗಿ ಹೇಳಲಾಗುತ್ತಿದೆ.