ಪೊವ್ವಲ್ನಲ್ಲಿ ಯುವತಿ ಸಾವು: ಆತ್ಮಹತ್ಯೆ ಕುರಿತು ಬರೆದಿಟ್ಟ ಪತ್ರದಲ್ಲಿ ಬೆಚ್ಚಿ ಬೀಳಿಸುವ ಸಂಗತಿಗಳು
ಮುಳ್ಳೇರಿಯ: ಬೋವಿಕ್ಕಾನ ಬಳಿಯ ಪೊವ್ವಲ್ ಬೆಂಚ್ ಕೋರ್ಟ್ ಸಮೀಪದ ಪಿ.ಎ. ಜಾಫರ್ರ ಪತ್ನಿ ಅಲೀಮ ಯಾನೆ ಶೈಮ (೩೫) ಆತ್ಮಹತ್ಯೆ ಕುರಿತಾಗಿ ಬರೆದಿಟ್ಟ ಪತ್ರವನ್ನು ಪತ್ತೆಹಚ್ಚಲಾಗಿದೆ. ಅದರಲ್ಲಿ ಬೆಚ್ಚಿ ಬೀಳಿಸುವ ಕೆಲವು ಮಾಹಿತಿಗಳು ಒಳಗೊಂಡಿರುವುದಾಗಿ ಹೇಳಲಾಗುತ್ತಿದೆ. ತನಿಖೆಗೆ ಅಡ್ಡಿಯಾಗಬಹುದೆಂಬ ಕಾರಣದಿಂದ ಪತ್ರದಲ್ಲಿರುವ ಮಾಹಿತಿಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ಕಳೆದ ಮಂಗಳವಾರ ರಾತ್ರಿ ಅಲೀಮ ಮನೆಯ ಬಾತ್ರೂಂನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅಂದು ರಾತ್ರಿ ಜಾಫರ್ ಹಾಗೂ ಅಲೀಮ ಮಧ್ಯೆ ವಾಗ್ವಾದ ನಡೆದಿತ್ತೆನ್ನಲಾಗಿದೆ. ಅನಂತರ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದ ಅಲಿಮರನ್ನು ಕೂಡಲೇ ಚೆರ್ಕಳ ಕೆ.ಕೆ.ಪುರದ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮಹಜರು ನಡೆಸಿದಬಳಿಕ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಲಭಿಸಿದ ಬಳಿಕವೇ ಸಾವಿಗೆ ಕಾರಣವೇನೆಂದು ತಿಳಿದುಬರಲಿದೆ ಯೆಂದು ಪೊಲೀಸರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆ ಬಳಿಕ ಬುಧವಾರರಾತ್ರಿ ಮೃತದೇಹವನ್ನು ಮನೆಗೆ ತಲುಪಿಸಿ ಪೊವ್ವಲ್ ಜುಮಾ ಮಸೀದಿ ಬಳಿ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಇದೇ ವೇಳೆ ಮಂಗ ಳ ವಾರ ರಾತ್ರಿಯಿಂದ ನಾಪತ್ತೆ ಯಾದ ಜಾಫರ್ರನ್ನು ಪತ್ತೆಹಚ್ಚ ಲಿರುವ ಶೋಧ ಮುಂದುವರಿ ಲಾಗಿದೆ. ಈತನ ಫೋನ್ ಸ್ವಿಚ್ ಆಫ್ ಆದ ಸ್ಥಿತಿಯಲ್ಲಿದೆ. ಪತಿಯ ಕಿರುಕುಳ ಸಹಿಸಲಾಗದೆ ಅಲೀಮ ಆತ್ಮಹತ್ಯೆಗೈದಿರುವುದಾಗಿ ಸಂಬಂಧಿಕರು ಆರೋಪಿಸಿದ್ದಾರೆ. ಅಲೀಮ ಕರ್ನಾಟಕದ ಸುಳ್ಯ ಜಯನಗರ ನಿವಾಸಿಯಾಗಿದ್ದಾರೆ.