ಪೋಕ್ಸೋ ಪ್ರಕರಣದ ಆರೋಪಿ ನಟಿ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಕಾಸರಗೋಡು: ನಟ ಮುಖೇಶ್ ಸೇರಿದಂತೆ ಹಲವು ಸಿನೆಮಾ ನಟರ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ್ದ ನಟಿಯ ವಿರುದ್ಧ ದಾಖಲಿಸಲಾಗಿರುವ ಪೋಕ್ಸೋ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆಕೆ ಸಲ್ಲಿಸಿದ ಅರ್ಜಿಯನ್ನು ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯ ವಜಾಗೈದಿದೆ. ಇದರ ಹೊರತಾಗಿ ನಟಿ ಇದೇ ಪ್ರಕರಣದಲ್ಲಿ ತಲಶ್ಶೇರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯದಲ್ಲೂ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಅದನ್ನೂ ನ್ಯಾಯಾಲಯ ವಜಾಗೈದಿದೆ.ಸಂಬಂಧಿಕಳಾದ ಯುವತಿ ಯೋರ್ವೆ ನೀಡಿದ ದೂರಿನಂತೆ ಈ ನಟಿ ವಿರುದ್ಧ ಪೊಲೀಸರು ಪೋಕ್ಸೋ ಕಾನೂನು ಪ್ರಕಾರ ಕೇಸು ದಾಖಲಿಸಿಕೊಂಡಿದ್ದರು. ನಾನು ಇನ್ನೂ ಪ್ರಾಯಕ್ಕೆ ತಲುಪುವ ಮೊದಲು ಸಿನೆಮಾದಲ್ಲಿ ನಟಿಸಲು ಅವಕಾಶ ನೀಡುವುದಾಗಿ ನಂಬಿಸಿ ನಟಿ ನನ್ನನ್ನು ಹಲವೆಡೆಗಳಿಗೆ ಕರೆದೊಯ್ದು ಒಪ್ಪಿಸಿದ್ದಳೆಂದು ಪೊಲೀಸರಿಗೆ ನೀಡಿದ ಯುವತಿ ದೂರಿನಲ್ಲಿ ಆರೋಪಿಸಿದ್ದಳು. ಅದರಂತೆ ನಟಿ ವಿರುದ್ಧ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದರು.ಪೊಲೀಸರು ಪ್ರಕರಣ ದಾಖಲಿಸಿಕೊಂಡ ಬೆನ್ನಲ್ಲೇ ನಟಿ ನಿರೀಕ್ಷಣಾ ಜಾಮೀನು ಕೋರಿ ಕಾಸರಗೋಡು ಮಾತ್ರವಲ್ಲ ತಲಶ್ಶೇರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯದಲ್ಲೂ ಅರ್ಜಿ ಸಲ್ಲಿಸಿದ್ದಳು. ಅದನ್ನು ಈ ಎರಡು ನ್ಯಾಯಾಲಯಗಳೂ ವಜಾಗೈದ ಗೈದಿದೆ. ಇದರ ಹೊರತಾಗಿ ನಟಿ ರಾಜ್ಯದ ಇತರ ಹಲವು ನ್ಯಾಯಾಲಯಗಳು ಹಾಗೂ ಮದ್ರಾಸ್ ಹೈಕೋರ್ಟ್ನಲ್ಲೂ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.