ಪೋಟೋಗ್ರಫಿ ವಲಯದ ಉದ್ಯೋಗ ಸಮಸ್ಯೆ ಬಗ್ಗೆ ವಿಧಾನಸಭೆಯಲ್ಲಿ ಮಂಡನೆ- ಶಾಸಕ ಎಕೆಎಂ ಅಶ್ರಫ್
ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇ ಶನ್‌ನ ೩೯ನೇ ಜಿಲ್ಲಾ ಸಮ್ಮೇಳನ ಉದಯಗಿರಿ ಶ್ರೀಹರಿ ಸಭಾಂಗಣದಲ್ಲಿ ನಡೆಯಿತು. ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ಅವರು ಮಾತನಾಡಿ ಫೋಟೋಗ್ರಫಿ ವಲಯದಲ್ಲಿನ ಉದ್ಯೋಗ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಮಂಡಿಸುವುದಾಗಿ ನುಡಿದ ಅವರು ಎಕೆಪಿಎಯ ಚಟುವಟಿಕೆ ಮಾದರಿಯಾ ಗಿದೆ ಎಂದು ಶ್ಲಾಘಿಸಿದರು. ಸಂಘಟನೆಯ ಜಿಲ್ಲಾ ಅಧ್ಯಕ್ಷ ಕೆ.ಸಿ. ಅಬ್ರಹಂ ಅಧ್ಯಕ್ಷತೆ ವಹಿಸಿದರು.
ಮಧೂರು ಪಂ. ಅಧ್ಯಕ್ಷ ಗೋಪಾ ಲಕೃಷ್ಣ ಶಿಕ್ಷಣ ಪ್ರಶಸ್ತಿ ವಿತರಿಸಿದರು. ಸಂಘಟನೆಯ ರಾಜ್ಯ ಅಧ್ಯಕ್ಷ ಸಂ ತೋಷ್ ಪ್ರಧಾನ ಭಾಷಣ ಮಾಡಿದರು. ಸಮ್ಮೇಳನದಂಗವಾಗಿ ನಡೆದ ಟ್ರೇಡ್ ಫೇರ್, ರಾಜ್ಯ ಕಾರ್ಯದರ್ಶಿ ಉಣ್ಣಿ, ವೀಡಿಯೋ ಪ್ರದರ್ಶನವನ್ನು ರಾಜ್ಯ ಕಾರ್ಯದರ್ಶಿ ಎ.ಸಿ. ಜೋನ್ಸನ್ ಉದ್ಘಾಟಿಸಿದರು. ರಾಜ್ಯ ಮಹಿಳಾ ವಿಂಗ್ ಕೋ-ಆರ್ಡಿನೇಟರ್ ಹರೀಶ್ ಪಾಲಕುನ್ನು, ಜಿಲ್ಲಾ ಕಾರ್ಯದರ್ಶಿ ವೇಣು ವಿ.ವಿ, ಜಿಲ್ಲಾ ಉಪಾಧ್ಯಕ್ಷರಾದ ಶರೀಫ್, ವಿಜಯನ್, ಜೊತೆಕಾರ್ಯದರ್ಶಿ ಗಳಾದ ಸುಧೀರ್ ಕೆ, ಮುಹಮ್ಮದ್ ಕುಂಞಿ, ಜಿಲ್ಲಾ ವೆಲ್‌ಫೆಯರ್ ಫಂಡ್ ಅಧ್ಯಕ್ಷ ಪ್ರಶಾಂತ್ ಕೆ.ವಿ, ಜಿಲ್ಲಾ ನ್ಯಾಚುರಲ್ ಕ್ಲಬ್ ಕೋ-ಆರ್ಡಿನೇಟರ್ ದಿನೇಶ್, ಸುನಿಲ್ ಕುಮಾರ್ ಪಿ.ಟಿ, ಅಶೋಕನ್ ಪೊಯಿನಾಚಿ, ಪ್ರಜಿತ್ ಎನ್.ಕೆ, ಸುಕು, ಪ್ರಜಿತ ಕಲಾಧರನ್ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಸುಗುಣನ್ ಇರಿಯ ಸ್ವಾಗತಿಸಿ, ಗೋವಿಂದನ್ ಚಂಗರಂಕಾಡ್ ವಂದಿಸಿದರು.
ಸಮಿತಿಗೆ ನೂತನ ಅಧ್ಯಕ್ಷರಾಗಿ ಕೆ.ಸಿ. ಅಬ್ರಹಾಂ, ಕಾರ್ಯದರ್ಶಿ ಯಾಗಿ ಸುಗುಣನ್ ಎರಿಯ ಆಯ್ಕೆಯಾದರು.