ಪ್ರಚಾರ ಇನ್ನಷ್ಟು ಬಿರುಸು : ಕೇಂದ್ರ ನೇತಾರರು ರಾಜ್ಯಕ್ಕೆ
ಕಾಸರಗೋಡು: ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿರುವಂತೆ ವಿವಿಧ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯ ವನ್ನು ಬಿರುಸುಗೊ ಳಿಸಿವೆ. ಮುಂದಿನ ದಿನಗಳಲ್ಲಿ ವಿವಿಧ ಪಕ್ಷಗಳ ಕೇಂದ್ರ ನೇತಾರರು ಕೇರಳಕ್ಕೆ ತಲುಪಲಿದ್ದಾರೆ.
ಎ. ೧೫ರಂದು ಪ್ರಧಾನಮಂತ್ರಿ ನರೇಂದ್ರಮೋದಿ ಹಾಗೂ ಕಾಂಗ್ರೆಸ್ ನೇತಾರರು ರಾಜ್ಯದಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸ ಲಿದ್ದಾರೆ. ಆಲತ್ತೂರು, ತೃಶೂರು ಲೋಕಸಭಾ ಕ್ಷೇತ್ರಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿಯವರು ಎನ್‌ಡಿಎ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವ ಹಿಸುವರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ಷಾ, ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಎಂಬಿವರು ಕೂಡಾ ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ತಲುಪಲಿದ್ದಾರೆ. ಇವರ ಆಗಮನ ದೊಂದಿಗೆ ರಾಜ್ಯದಲ್ಲಿ ಚುನಾವಣಾ ಪ್ರಚಾರ ಕಾರ್ಯ ಇನ್ನಷ್ಟು ಬಿರುಸು ಗೊಳ್ಳಲಿದೆ. ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಕೇಂದ್ರ ನೇತಾರರಾದ ಪ್ರಮೋದ್ ಸಾವಂತ್, ಅನುರಾಗ್ ಠಾಕೂರ್ ಎಂಬಿವರು ಕಲ್ಲಿಕೋಟೆಯಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಪುರುಷೋತ್ತಮ ರೂಪಾಲ, ಮೀನಾಕ್ಷಿ ಎಂಬಿವರು ವಯನಾಡ್, ಇಡುಕ್ಕಿ, ಎರ್ನಾಕುಳಂ ಎಂಬಿಡೆಗಳಲ್ಲೂ, ಪುರುಷೋತ್ತಮ ರೂಪಾಲ, ಶಿವರಾಜ್ ಸಿಂಗ್ ಚೌಹಾಣ್ ಆಲಪ್ಪುಳದಲ್ಲೂ, ಅಣ್ಣಾಮಲೈ ತಿರುವನಂತಪುರ, ಕೊಲ್ಲಂ, ಪತ್ತನಂತಿಟ್ಟ ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ೧೫ರಂದು ಕಲ್ಲಿಕೋಟೆಗೆ ಆಗಮಿ ಸುವರು. ೧೬ರಂದು ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿರುವನಂತಪುರ ಹಾಗೂ ಕಣ್ಣೂರಿನಲ್ಲಿ ಪ್ರಚಾರ ನಡೆಸುವರು. ಎಡರಂಗ ಅಭ್ಯ ರ್ಥಿಗಳ ಪ್ರಚಾರಕ್ಕಾಗಿ ಸಿಪಿಎಂ ನೇತಾರ ರಾದ ಪ್ರಕಾಶ್ ಕಾರಾಟ್, ಸೀತಾರಾಮ ಯೆಚ್ಚೂರಿ ಎಂಬಿವರು ಕೂಡಾ ಜಿಲ್ಲೆಯಲ್ಲಿ ಪ್ರಚಾರ ನಡೆಸಲಿದ್ದಾರೆ.