ಪ್ರತಾಪನಗರದಲ್ಲಿ ಕ್ಲಬ್ ವಾರ್ಷಿಕೋತ್ಸವ, ಸಾಧಕರಿಗೆ ಸನ್ಮಾನ
ಉಪ್ಪಳ: ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ಪ್ರತಾಪನಗರ ಇದರ 32ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕ್ಲಬ್‌ನ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮೂರು ಮಂದಿಗೆ ಸನ್ಮಾನಿಸಲಾಯಿತು. ರ‍್ಯಾಂಕ್ ವಿಜೇತೆ ವೃದ್ದಿ ಶೆಟ್ಟಿ ತಿಂಬರ, ಪ್ರಶಸ್ತಿ ವಿಜೆತ ಕಂಬಳ ಓಟಗಾರ ರಕ್ಷಿತ್ ಶೆಟ್ಟಿ ಮಂಗಲ್ಪಾಡಿ, ಮೈಕ್ರೋ ಆರ್ಟ್್ಸ ವೆಂಕಟೇಶ ಆಚಾರ್ಯ ಇಚ್ಲಂಗೋಡು ಇವರನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರಾದ ಶೇಖರ ಪೂಜಾರಿ, ಡಾ.ಮನು ಭಟ್ ಕೆದುಕೋಡಿ, ಬ್ಲೋಕ್ ಪಂಚಾಯತ್ ಸದಸ್ಯೆ ಅಶ್ವಿನಿ.ಎಂ.ಎಲ್, ಪಂಚಾಯತ್ ಸದಸ್ಯೆ ಸುಧಾಗಣೇಶ್, ಕ್ಲಬ್ ಅಧ್ಯಕ್ಷ ಗಣೇಶ್ ಇವರು ಫಲ ಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿದರು.