ಪ್ರಧಾನಮಂತ್ರಿ ಇಂದು ತೃಶೂರಿಗೆ
ತೃಶೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ತೃಶೂರಿಗೆ ಆಗಮಿಸಲಿದ್ದು, ಬಿಜೆಪಿ ಹಾಗೂ ಮಹಿಳಾಮೋರ್ಚಾ ಹಮ್ಮಿ ಕೊಂಡ ರೋಡ್ ಶೋ ಮತ್ತು ಮಹಿಳಾ ಸಮ್ಮೇಳನದಲ್ಲಿ ಭಾಗವಹಿ ಸುವರು. ಅಪರಾಹ್ನ ೨ ಗಂಟೆಗೆ ಕುಟ್ಟನೆಲ್ಲೂರ್ ಹೆಲಿಪ್ಪಾಡ್ನಲ್ಲಿ ಇಳಿಯುವ ಪ್ರಧಾನಮಂತ್ರಿಯವರನ್ನು ಜಿಲ್ಲಾಧಿಕಾರಿ ವಿ.ಆರ್. ಕೃಷ್ಣತೇಜ ಸ್ವಾಗತಿಸುವರು. ಬಳಿಕ ಕಾರಿನಲ್ಲಿ ತೃಶೂರಿಗೆ ತೆರಳುವ ಅವರನ್ನು ಬಿಜೆಪಿ ರಾಷ್ಟ್ರೀಯ, ರಾಜ್ಯ ನೇತಾರರು ಸ್ವಾಗತಿಸುವರು. ಜಿಲ್ಲಾ ಜನರಲ್ ಆಸ್ಪತ್ರೆಯ ಮುಂಭಾಗದಿಂದ ರೋಡ್ ಶೋ ಆರಂಭಗೊಳ್ಳಲಿದೆ.
ಅಪರಾಹ್ನ ೩ ಗಂಟೆಗೆ ತೆಕ್ಕಿಲ್ಕಾಡ್ ಮೈದಾನದಲ್ಲಿ ೨ ಲಕ್ಷ ಮಹಿಳೆಯರು ಭಾಗವಹಿಸುವ ಬೃಹತ್ ಸಮ್ಮೇಳನದಲ್ಲಿ ಪ್ರಧಾನಮಂತ್ರಿ ಮಾತನಾಡಲಿದ್ದಾರೆ. ಪ್ರಧಾನಮಂತ್ರಿಯವರು ಇಂದು ತೃಶೂರಿನಲ್ಲಿ ಭಾಗವಹಿಸುವ ಬೃಹತ್ ಕಾರ್ಯಕ್ರಮದೊಂದಿಗೆ ಕೇರಳದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರಕ್ಕೂ ಚಾಲನೆ ದೊರಕಲಿದೆ. ಮಹಿಳಾ ಸಂಗಮದಲ್ಲಿ ೨ ಲಕ್ಷದಷ್ಟು ಮಂದಿ ಮಹಿಳೆಯರು ಭಾಗವಹಿಸಲಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಹೆಚ್ಚು ಗೆಲುವಿನ ನಿರೀಕ್ಷೆ ಹೊಂದಿರುವ ತೃಶೂರು ಲೋಕಸಭಾ ಕ್ಷೇತ್ರದಲ್ಲಿ ಇಂದು ಪ್ರಧಾನಮಂತ್ರಿ ಭಾಗವಹಿಸುವ ಬೃಹತ್ ಕಾರ್ಯಕ್ರಮ ನಡೆಯಲಿದೆ. ಸುರೇಶ್ಗೋಪಿ ಈ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತಗೊಂಡಿದೆ.