ಪ್ರಧಾನಮಂತ್ರಿ ನಾಳೆ ಕೇರಳಕ್ಕೆ: ತೃಶೂರಿನಲ್ಲಿ ಬೃಹತ್ ರೋಡ್ಶೋ
ತೃಶೂರು: ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಾಳೆ ಕೇರಳಕ್ಕೆ ಆಗಮಿಸುವರು. ಮಧ್ಯಾಹ್ನ ವೇಳೆ ಕೊಚ್ಚಿಗೆ ತಲುಪುವ ಪ್ರಧಾನಮಂತ್ರಿ ಬಳಿಕ ತೃಶೂರಿಗೆ ತೆರಳುವರು. ಅಲ್ಲಿನ ತೆಕ್ಕಿನ್ಕಾಡ್ ಮೈದಾನದಲ್ಲಿ ರೋಡ್ಶೋ ನಡೆಯಲಿದ್ದು, ಅನಂತರ ಮಹಿಳಾ ಸಮ್ಮೇಳನದಲ್ಲಿ ನರೇಂದ್ರ ಮೋದಿ ಭಾಗವಹಿಸಿ ಮಾತನಾಡುವರು.
ಪ್ರಧಾನಮಂತ್ರಿ ಇಂದು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುವರು. ರಸ್ತೆ, ವಾಯುಸಾರಿಗೆ ರಂಗಗಳಲ್ಲಾಗಿ ೧೯,೫೦೦ ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ತಮಿಳುನಾಡಿನಲ್ಲಿ ನಡೆಯಲಿದೆ.