ಪ್ರಧಾನಮಂತ್ರಿ ಸ್ಥಾನಕ್ಕೆ ‘ಇಂಡಿಯ’ ರಾಹುಲ್ ಗಾಂಧಿಯನ್ನು ಪರಿಗಣಿಸಿಲ್ಲ- ಮುಖ್ಯಮಂತ್ರಿ
ಹೊಸದುರ್ಗ: ಪ್ರಧಾನಮಂತ್ರಿ ಸ್ಥಾನಕ್ಕೆ ರಾಹುಲ್ ಗಾಂಧಿಯವರನ್ನು ವಿಪಕ್ಷಗಳ ಒಕ್ಕೂಟವಾದ ‘ಇಂಡಿಯ’ ಪರಿಗಣಿಸಿಲ್ಲವೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಅತಿ ನಿರ್ಣಾಯಕ ಹಂತದಲ್ಲಿ ರುವ ವೇಳೆ ಸ್ವಂತ ಪಕ್ಷದ ನೇತೃತ್ವ ಸ್ಥಾನದಿಂದ ನುಣುಚಿಕೊಂಡ ನೇತಾರನಾಗಿದ್ದಾರೆ ರಾಹುಲ್‌ಗಾಂಧಿ. ಅಂತಹ ಹೆಸರು ಹೊಂದಿರುವ ರಾಹುಲ್ ಗಾಂಧಿಯನ್ನು ದೇಶದ ನಾಯಕತ್ವಕ್ಕೆ ಅರ್ಹರಲ್ಲವೆಂದು ಮುಖ್ಯಮಂತ್ರಿ ಹೇಳಿದ್ದಾರೆ. ಹೊಸ ದುರ್ಗದಲ್ಲಿ ನಡೆದ ಪತ್ರಿಕಾಗೋಷಿ ಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಬಿಜೆಪಿ ಮತ್ತು ಸಂಘ ಪರಿವಾರ ತಮ್ಮ ಬದ್ದ ಎದುರಾಳಿಯಾಗಿದ್ದಾರೆಂದು ರಾಹುಲ್‌ಗಾಂಧಿ ಹೇಳುತ್ತಿದ್ದರೂ ಅವರನ್ನು ಸಮರ್ಥವಾಗಿ ಎದುರಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಉತ್ತರ ಭಾರತದಿಂದ ಪಲಾಯನಗೈದು ಎರಡೇ ಬಾರಿ ವಯನಾಡಿನಲ್ಲಿ ಈಗ ಸ್ಪರ್ಧಿಸುತ್ತಿರುವ ರಾಹುಲ್‌ಗೆ ಜನರನ್ನು ಇನ್ನೂ ಮುಟ್ಟಾಳರನ್ನಾಗಿಸಲು ಸಾಧ್ಯವಾಗದು. ಕೇರಳದ ಮುಖ್ಯಮಂತ್ರಿಯನ್ನು ಯಾಕೆ ಬಂಧಿಸಲಾಗಿಲ್ಲವೆಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಎತ್ತಿರುವ ಪ್ರಶ್ನೆ ಒಂದು ಅತೀ ದೊಡ್ಡ ತಮಾಷೆ ಯಾಗಿದೆ. ಡಿ.ಎಲ್.ಎಫ್‌ನೊಂದಿಗೆ ಅವರ ಪತಿ ಹೊಂದಿರುವ ನಂಟಾದರೂ ಏನು? ೧೭೦ ಕೋಟಿ ರೂ.ಗಳ ಇಲೆಕ್ಟ್ರಿಕಲ್ ಬೋಂಡ್ ಬಿಜೆಪಿ ಕೈ ಸೇರಿರುವುದಾದರೂ ಹೇಗೆ? ಅದಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗ ಬೇಕಾದವರೇ ಇನ್ನೂ ಬಂಧನಕ್ಕೊ ಳಗಾಗದೇ ಇರವಾಗ ಅವರನ್ನು ಈ ತನಕ ಬಂಧಿಸದೇ ಇರುವವರಿಗೆ ಅವರು ಧನ್ಯವಾದ ಹೇಳಬೇಕು. ಅದನ್ನು ಬಿಟ್ಟು ಪಿಣರಾಯಿ ವಿಜಯನ್‌ರನ್ನು ಬಂಧಿಸಬೇಕೆಂದು ಹೇಳುವುದು ಬಾಲಿಷತನ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯ ಬಳಿಕ ಪಾಲಕುನ್ನು, ತೃಕ್ಕರಿಪುರ, ಪಯ್ಯನ್ನೂರು ಎಂಬೆಡೆಗಳಲ್ಲಿ ನಿನ್ನೆ ನಡೆದ ಎಡರಂಗ ಚುನಾವಣಾ ಪ್ರಚಾರ ಸಭೆಗಳಲ್ಲಿ ಮುಖ್ಯಮಂತ್ರಿ ಭಾಗವಹಿಸಿ ಎಡರಂಗದ ಉಮೇದ್ವಾರ ಎಂ.ವಿ. ಬಾಲಕೃಷ್ಣನ್‌ರಿಗೆ ಮತ ನೀಡಿ ಗೆಲ್ಲಿಸುವಂತೆ ಮತದಾರರೊಡನೆ ವಿನಂತಿಸಿಕೊಂಡರು. ಎಡರಂಗ ರಾಜ್ಯ ಸಂಚಾಲಕ ಇ.ಪಿ. ಜಯರಾಜನ್, ಉಮೇದ್ವಾರ ಎಂ.ವಿ. ಬಾಲಕೃಷ್ಣನ್ ಸೇರಿದಂತೆ ಎಡರಂಗದ ಹಲವು ನೇತಾರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.